Advertisement

ಪಿಎಂಶ್ರೀಗೆ ಕೇಂದ್ರ ಅನುಮೋದನೆ; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುಕೂಲ

12:26 AM Sep 08, 2022 | Team Udayavani |

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಕ ದಿನಾಚರಣೆ ದಿನದಂದು ಘೋಷಣೆ ಮಾಡಿದ್ದ ಪ್ರಧಾನಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯಾ (ಪಿಎಂ-ಶ್ರೀ) ಯೋಜನೆಗೆ ಬುಧವಾರ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 27, 360 ಕೋಟಿ ರೂ. ವೆಚ್ಚ ಮಾಡಲೂ ತೀರ್ಮಾನಿಸಲಾಗಿದೆ.

Advertisement

ಅನುಕೂಲವೇನು?
ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 14,500 ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಇದರಿಂದ ಅನುಕೂಲವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ನಿಟ್ಟಿನಲ್ಲಿ ಈ ಶಾಲೆಗಳು ಪ್ರಯೋಗಶಾಲೆಯಂತೆ ಕೆಲಸ ಮಾಡಲಿವೆ. ಶಾಲೆಗಳು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕೇಂದ್ರಗಳು. ಅವುಗಳಿಗೆ ಮೂಲಸೌಕರ್ಯ, ಉತ್ತಮ ಶಿಕ್ಷಕರನ್ನು ನೀಡಲು ಈ ಯೋಜನೆಯಿಂದ ಅನುಕೂಲವಾಗಲಿದೆ.

ಜಂಟಿ ಯೋಜನೆ
ಕೇಂದ್ರ ಮತ್ತು ರಾಜ್ಯಗಳ ಜಂಟಿ ಅನುದಾನದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಐದು ವರ್ಷಗಳಿಗೆ ಯೋಜನೆಯ ಒಟ್ಟು ವೆಚ್ಚವು 27,360 ಕೋಟಿ ರೂ. ಈ ಪೈಕಿ ಕೇಂದ್ರದ ಪಾಲು 18,128 ಕೋಟಿ ರೂ. ನೀಡಲಿದೆ. ಇದರಿಂದ ದೇಶದ 18.7 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದೇನು?
– ನವೋದಯ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಮತ್ತು ಪಿಎಂ ಶ್ರೀ ಯೋಜನೆಯಡಿ ಬರುವ ಶಾಲೆಗಳು ಎನ್‌ಇಪಿ ಪ್ರಯೋಗ ಶಾಲೆಗಳಂತೆ ಕಾರ್ಯ ನಿರ್ವಹಿಸಲಿವೆ.
– ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು ಮತ್ತು ವಿವಿಧ ಶೈಕ್ಷಣಿಕ ಸಾಮರ್ಥ್ಯಗಳನ್ನು ಗಮದಲ್ಲಿಟ್ಟುಕೊಂಡು ಉನ್ನತ ರೀತಿಯ ಶಿಕ್ಷಣ.
– ಎನ್‌ಇಪಿಯ ಪ್ರಕಾರ, ಸ್ವಂತ ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಹೊಸ ಯೋಜನೆಯಲ್ಲಿ ಅವಕಾಶ ಮಕ್ಕಳಿಗೆ ಸಿಗಲಿದೆ.
– ಸೌರ ಫ‌ಲಕಗಳು ಮತ್ತು ಎಲ…ಇಡಿ ದೀಪಗಳನ್ನು ಶಾಲೆಗಳಿಗೆ ಒದಗಿಸಲಾಗುತ್ತದೆ. ನೈಸರ್ಗಿಕ ಕೃಷಿಯೊಂದಿಗೆ ಪೌಷ್ಟಿಕಾಂಶದ ಉದ್ಯಾನಗಳು, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್‌ ಮುಕ್ತ ವಲಯ ಮುಂತಾದ ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡಿರುವ ಈ ಶಾಲೆಗಳನ್ನು “ಹಸಿರು ಶಾಲೆ’ಗಳಾಗಿ ಅಭಿವೃದ್ಧಿ.

ಕೇಂದ್ರ ಪ್ರಯೋಜಿತ ಯೋಜನೆ
ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಅನುಷ್ಠಾನ ವೆಚ್ಚವನ್ನು 60:40 ಅನುಪಾತದಲ್ಲಿ ವಿಭಾಗಿಸುತ್ತದೆ. ಉದಾಹರಣೆಗೆ, ಬಿಸಿಯೂಟ ಯೋಜನೆ(ಪಿಎಂ ಪೋಷಣ್‌), ಪಿಎಂ ಅವಾಸ್‌ ಯೋಜನೆಗಳು ಕೇಂದ್ರ ಪ್ರಯೋಜಿತ ಯೋಜನೆಗಳಾಗಿವೆ. ಇಲ್ಲಿ 60:40ರ ಅನುಪಾತದಲ್ಲಿ ಯೋಜನಾ ವೆಚ್ಚ ನಿರ್ವಹಿಸಲಾಗುತ್ತದೆ.

Advertisement

ಶಾಲೆಗಳು ಮೇಲ್ದರ್ಜೆಗೆ
ಪಿಎಂ ಶ್ರೀ ಯೋಜನೆಯಡಿಯಲ್ಲಿ ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಇದರ ಅರ್ಥವೆಂದರೆ, ಕೇಂದ್ರೀಯ ವಿದ್ಯಾಲಯಗಳು, ಜವಾಹರ್‌ ನವೋದಯ ವಿದ್ಯಾಲಯಗಳು, ರಾಜ್ಯ ಸರ್ಕಾರಿ ಶಾಲೆಗಳು ಅಥವಾ ಪಾಲಿಕೆ ನಿರ್ವಹಿಸುವ ಶಾಲೆಗಳು ಪಿಎಂಶ್ರೀ ಶಾಲೆಗಳಾಗಬಹುದು.

ರೈಲ್ವೆ ಇಲಾಖೆಯ ಭೂಮಿ ದೀರ್ಘಾವಧಿ ಭೋಗ್ಯಕ್ಕೆ
ಪಿಎಂ ಗತಿಶಕ್ತಿ ಯೋಜನೆಗಾಗಿ ರೈಲ್ವೆ ಇಲಾಖೆಯ ಭೂಮಿಯನ್ನು ದೀರ್ಘಾವಧಿ ಭೋಗ್ಯಕ್ಕೆ ನೀಡಲು ಅನುಕೂಲವಾಗುವ ನೀತಿಗೆ ಇದೇ ವೇಳೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೊಸ ನೀತಿಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ 300 ಕಾರ್ಗೊ ಟರ್ಮಿನಲ್‌ಗ‌ಳು ನಿರ್ಮಾಣವಾಗಲಿದ್ದು, 1.25 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ಹೊಸ ನೀತಿಯ ಅನ್ವಯ 35 ವರ್ಷಗಳವರೆಗೆ ರೈಲ್ವೆ ಇಲಾಖೆಯ ಭೂಮಿಯನ್ನು ಭೋಗ್ಯಕ್ಕೆ ನೀಡಬಹುದಾಗಿದೆ. ಈ ಹಿಂದೆ ಇದರ ಅವಧಿ 5 ವರ್ಷಗಳಿತ್ತು. ಇದರಿಂದ ಮೂಲಸೌಕರ್ಯ ಮತ್ತು ಟರ್ಮಿನಲ್‌ಗ‌ಳನ್ನು ಕ್ಷಿಪ್ರ ಗತಿಯಲ್ಲಿ ನಿರ್ಮಾಣ ಮಾಡಲು ಅನುಕೂಲವಾಗಲಿದೆ. ಅಲ್ಲದೇ ಈ ಹಿಂದೆ ಭೂಮಿ ಮೌಲ್ಯದ ಶೇ.6ರಷ್ಟು ಭೋಗ್ಯ ಹಣವನ್ನು ಪಡೆಯಲಾಗುತ್ತಿತ್ತು. ಅದನ್ನು ಈಗ ಇಳಿಸಿದ್ದು, ಭೂಮಿ ಮೌಲ್ಯದ ಶೇ.1.5ರಷ್ಟು ಭೋಗ್ಯ ಹಣವನ್ನು ಪಡೆಯಲಾಗುತ್ತದೆ. ಇದಲ್ಲದೆ ಖಾಸಗಿ- ಸರ್ಕಾರಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಕೇಂದ್ರೀಯ ವಿದ್ಯಾಲಯ ಸಂಘಟನ್‌ ನೆರವಿನೊಂದಿಗೆ ಶಾಲೆಗಳ ನಿರ್ಮಿಸಲಾಗುತ್ತದೆ.

14,500- ಒಟ್ಟು ಶಾಲೆಗಳು
27,360 ಕೋಟಿ ರೂ.- ಒಟ್ಟು ವೆಚ್ಚ
18,128 ಕೋಟಿ ರೂ.- ಕೇಂದ್ರದ ಪಾಲು
18. 7 ಲಕ್ಷ – ಪ್ರಯೋಜನ ಪಡೆಯಲಿರುವ ವಿದ್ಯಾರ್ಥಿಗಳು

Advertisement

Udayavani is now on Telegram. Click here to join our channel and stay updated with the latest news.

Next