Advertisement

ಲಸಿಕೆ ಪಡೆಯಲು ಪ್ರದೀಪ ಶೆಟ್ಟರ ಸಲಹೆ

08:12 PM Jan 04, 2022 | Team Udayavani |

ಹುಬ್ಬಳ್ಳಿ: ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ನಾಯಕತ್ವ ಗುಣ ರೂಢಿಸಿಕೊಳ್ಳಬೇಕೆಂದು ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ ಹೇಳಿದರು.

Advertisement

ಇಲ್ಲಿನ ಚೇತನ ವಾಣಿಜ್ಯ ಮತ್ತು ಬಿಸಿಎಂ ಕಾಲೇಜಿನಲ್ಲಿ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕಾಕರಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 15-18 ವರ್ಷದೊಳಗಿನ ಎಲ್ಲರಿಗೂ ಲಸಿಕೆ ನೀಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕೆಂದರು.

ಉಪನ್ಯಾಸಕಿ ಪ್ರೊ|ಶಿಲ್ಪಾ ಜಡಿಮಠ ಬಿಕಾಂ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ರಚಿಸಿರುವ ಕಂಪ್ಯೂಟರೈಸ್ಡ್ ಅಂಕೌಂಟಿಂಗ್‌ ಪುಸ್ತಕ ಬಿಡುಗಡೆಗೊಳಿಸಿದರು. ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ|ವಿಶ್ವನಾಥ ಕೊರವಿ ಪರಿಚಯಿಸಿದರು.

ಪ್ರೊ|ಜಗದೀಶ ದ್ಯಾವಪ್ಪನವರ ಕಾಲೇಜು ವಿದ್ಯಾರ್ಥಿ ಸಂಸತ್ತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಪ್ರದೀಪ ಶೆಟ್ಟರ ಹಾಗೂ ಪ್ರೊ|ಶಿಲ್ಪಾ ಜಡಿಮಠ ಅವರನ್ನು ಸನ್ಮಾನಿಸಲಾಯಿತು. ಪ್ರೊ|ಮಹೇಶ ದ್ಯಾವಪ್ಪನವರ, ಡಾ|ರಮಾಕಾಂತ ಕುಲಕರ್ಣಿ, ಪ್ರೊ|ಯಶೋಧ ನಾಯಕ್‌, ಪ್ರೊ|ಸುನೀತಾ ಸಾಲಿಮಠ, ಪ್ರೊ| ನಾಗರಾಜ ಬರದೆಲಿ, ಪ್ರೊ|ಸರಮರಿನ್‌, ಪ್ರೊ|ಶಿಲ್ಪಾ ವಗªರ್‌, ಪ್ರೊ| ಶ್ವೇತಾ ಇನ್ನಿತರರು ಇದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next