Advertisement

ಸಂಸ್ಕಾರಯುತ ಶಿಕ್ಷಣ ಅವಶ್ಯ: ಹಾರಕೂಡ ಶ್ರೀ

07:53 AM Mar 03, 2019 | |

ಭಾಲ್ಕಿ: ನಮ್ಮ ಮಕ್ಕಳು ಉತ್ತಮ ಸಂಸ್ಕಾರ ಪಡೆದರೆ ಅವರ ಶಿಕ್ಷಣಕ್ಕೆ ಬೆಲೆ ಬರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಸತ್ಯನಿಕೇತನ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಂದೆ, ತಾಯಿ, ಗುರು, ಹಿರಿಯರ ಸೇವೆ ಮಾಡುವುದರೊಂದಿಗೆ ಶಿಕ್ಷಣದ ಮಹತ್ವ ತಿಳಿದುಕೊಳ್ಳಬೇಕು. ಆಗ ಮಾತ್ರ ಅಂತಹ ಶಿಕ್ಷಣಕ್ಕೆ ಮಹತ್ವವಿದೆ ಎಂದು ಹೇಳಿದರು.

ಇದೇ ವೇಳೆ ಪಾಕಿಸ್ಥಾನದ ವಶದಲ್ಲಿದ್ದ ದೇಶದ ವೀರಯೋಧ ಅಭಿನಂದನ ಅವರನ್ನು ಬೇಷರತ್ತಾಗಿ ಭಾರತಕ್ಕೆ ಕಳಿಸಿಕೊಟ್ಟ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ನೆರೆದ ಎಲ್ಲಾ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೆಲ್ಯೂಟ್‌ ಹೇಳಿ ರಾಷ್ಟ್ರಗೀತೆಯೊಂದಿಗೆ ಅಭಿನಂದನ್‌ ಅವರ ಧೈರ್ಯ ಸಾಹಸ ಹಾಗೂ ದೇಶಭಕ್ತಿಗೆ ತಲೆ ಬಾಗಿದರು.
 
ಸಾರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ.ವಿಶ್ವನಾಥ, ಉಪನ್ಯಾಸಕ ಆಶಾ ಭುಜಂಗೆ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೂರ್ಯಕಾಂತ ಭಂಗೂರ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶರದಕುಮಾರ ಸಿರ್ಸೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಡಿ.ಡಿ.ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸಂಜನಾ ಸಮಜುಕುಮಾರ, ವೈಷ್ಣವಿ ಜನಾರ್ಧನ, ರಮಾಬಾಯಿ ನರಸಿಂಗರಾವ್‌, ಆರತಿ ರಾಮರಾವ್‌ ಅನುಭಾವದ ನುಡಿ ನುಡಿದರು. ಗಣಿತ ವಿಷಯ ಶಿಕ್ಷಕಿ ಅಂಬಿಕಾ ಕೋರೆ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿಸಿದರು. ಇಂಗ್ಲಿಷ್‌ ವಿಷಯ ಶಿಕ್ಷಕ ಎಸ್‌.ಎಚ್‌. ಕುಲ್ಕರ್ಣಿ ವಾರ್ಷಿಕ ವರದಿ ವಾಚನ ಮಾಡಿದರು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಿವಾನಂದ ಗುಂದಗಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಕುಮಾರ ತಳವಾಡೆ, ಪಿಯು ಕಾಲೇಜಿನ ಪ್ರಾಚಾರ್ಯ ಜೈಕಾಂತ ಗಂಗೋಜಿ, ಮಹಾರುದ್ರಪ್ಪಾ ಸಿರ್ಸೆ, ಐಟಿಐ ಕಾಲೇಜಿನ ಪ್ರಾಚಾರ್ಯ ರಮೇಶ ಗುನ್ನಾಳೆ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಾಜಿರಾವ್‌ ಮೇತ್ರೆ, ಜಿ.ಬಿ.ಸ್ವಾಮಿ, ವಿ.ಜಿ.ಉಮ್ಮಾ ಉಪಸ್ಥಿತರಿದ್ದರು. ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಬೋಚರೆ ಸ್ವಾಗತಿಸಿದರು. ಬಿ.ಆರ್‌. ಕಾಗೆ ನಿರೂಪಿಸಿದರು, ಎನ್‌.ಎಂ.ರಾಠೊಡ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next