Advertisement

Prabhu Chavan: ಸಮಯಕ್ಕೆ ಸರಿಯಾಗಿ ಬಾರದ ಕಂದಾಯ ಇಲಾಖೆಯ ಸಿಬ್ಬಂದಿಗಳ ಚಳಿ ಬಿಡಿಸಿದ ಶಾಸಕ

01:23 PM Nov 10, 2023 | Team Udayavani |

ಔರಾದ: ಸಮಯಕ್ಕೆ ಸರಿಯಾಗಿ ಸೇವೆಗೆ ಬಾರದೆ ಇರುವ ಕಂದಾಯ ಇಲಾಖೆಯ ಸಿಬ್ಬಂದಿಗಳ ಚಳಿ ಬಿಡಿಸಿದ ಶಾಸಕ ಪ್ರಭು ಚವ್ಹಾಣ.

Advertisement

ಶನಿವಾರ ಬೆಳಿಗ್ಗೆ ಪಟ್ಟಣದ ಮಿನಿವಿಧಾನ ಸೌದ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸಮಯ ಪಾಲನೆ ವಿಕ್ಷಣೆ ಮಾಡಿದರು.

ಮಿನಿ ವಿಧಾನಸೌಧ ಕಚೇಯಲ್ಲಿರುವ 35 ಜನ ಸಿಬ್ಬಂಧಿಗಳು ಸೇವೆಗೆ ಬಾರದೆ ಇರುವುದನ್ನು ಕಂಡು ಕೆಂಡಾಮಂಡಲರಾಗಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಅಧಿಕಾರಿಗಳ ನಿಷ್ಕಾಳಜಿ ಬಗ್ಗೆ ಎಳೆ ಎಳೆಯಾಗಿ ತಿಳಿಸಿ ಸೇವೆಗೆ ಬಾರದೆ ಇರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆದೇಶ ನೀಡಿದರು.

ಬೆಳಿಗ್ಗೆ ಸಾಮಾನ್ಯ ಜನರಂತೆ ಕಂದಾಯ ಇಲಾಖೆಗೆ ಬಂದ ಶಾಸಕ ಪ್ರಭು ಚವ್ಹಾಣ ಕಚೇರಿಯಲ್ಲಿ ಸುತ್ತಾಡಿ ಮುಖ್ಯದ್ವಾರದ ಮುಂದೆ ತಹಶೀಲ್ದಾರ ಜೊತೆಗೆ ಖುರ್ಚಿ ಹಾಕಿಕೊಂಡು ತಡವಾಗಿ ಬಂದ ಸಿಬ್ಬಂದಿ ಹೆಸರು ಹುದ್ದೆ ಇಲಾಖೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಮಾತಾಡಿದವರು, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಬ್ಬಂದಿಗಳು ಸಮಯಕ್ಕೆ ಬರುತ್ತಿಲ್ಲಾ ಎನ್ನುವ ದೂರುಗಳು ಸಾರ್ವಜನಿಕರಿಂದ ಬಂದಿರುವ ಹಿನ್ನಲೆಯಲ್ಲಿ ದಿಢೀರನೆ ಭೇಟಿ ನೀಡಲಾಗಿದೆ ಎಂದ ಅವರು, ಸೇವೆಗೆ ಬಾರದೆ ಇರುವ 34 ಸಿಬ್ಬಂದಿಗಳ ಒಂದು ದಿನದ ವೇತನ ತಡೆಯುವಂತೆ ಹಾಗೂ ಕಾರಣ ಕೇಳಿ ನೋಟಿಸ್ ನೀಡುವಂತೆ ತಹಶಿಲ್ದಾರ ಮಲ್ಲಶೆಟ್ಟಿ ಚಿದ್ರೆಗೆ ಸೂಚನೆ ನೀಡಿದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ ಅಲ್ಲದೆ ಪ್ರತಿಯೊಂದು ಕೆಲಸಕ್ಕೂ ಬೇಡಿಕೆಯನ್ನು ಇಡುತ್ತಿದ್ದಾರೆಂದು ಆರೋಪಿಸಿದರು.

ತಾಲೂಕಿನ ಜನರ ಸೇವಕನಾಗಿದ್ದೆನೆ ಜನತೆಗೆ ಸಕಾಲಕ್ಕೆ ಕೆಲಸ ಮಾಡಿಕೊಡದೆ ಇರುವುದನ್ನು ಕಡತಗಳು ಪರಿಶೀಲನೆ ಮಾಡಲಾಗಿದೆ ವಾರದಲ್ಲಿ ಇಲಾಖೆಯಲ್ಲಿನ ಎಲ್ಲಾ ಕೆಲಸವೂ ಕಾನೂನು ಪ್ರಕಾರ ಅಧಿಕಾರಿಗಳು ಮಾಡಿಕೊಡಲು ಮುಂದಾಗಬೇಕು ಇಲ್ಲವಾದಲ್ಲಿ ರಸ್ತೆಗಿಳಿದು ಜನರೊಂದಿಗೆ ಸೇರಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದರೂ.

ಕಚೇರಿಯಲ್ಲಿ ಸ್ವಚ್ಚತೆ ಹಾಗೂ ಸಿಬ್ಬಂದಿಗಳ ಮೇಲೆ ನಿಯಂತ್ರಣ ಇಟ್ಟು ಕೆಲಸ ಮಾಡಿ ಎಂದು ತಹಶಿಲ್ದಾರಗೆ ಸೂಚನೆ ನೀಡಿದರು.

ಇಲಾಖೆಯಲ್ಲಿ ಎಲ್ಲಾ ತಪ್ಪುಗಳನ್ನು ಸರಿ ಪಡಿಸಿಕೊಳ್ಳುತ್ತೆನೆ ಇನ್ನೂ ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ಜಾಗ್ರುತೆಯಿಂದ ಕೆಲಸ ಮಾಡುವುದಾಗಿ ತಹಶಿಲ್ದಾರ ಚಿದ್ರೆ ತಿಳಿಸಿದರು ಕೆಲಸಕ್ಕೆ ಬಾರದೆ ಇರುವ ಹಾಗೂ ಸಮಯಕ್ಕೆ ಸರಿಯಾಗಿ ಬಾರದೆ ಇರುವ ಸಿಬ್ಬಂದಿ ಗೆ ನೋಟಿಸ್ ನೀಡುವುದರ ಜೋತೆಗೆ ಒಂದು ದಿನದ ವೇತನವು ತಡೆ ಹಿಡಿಯಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Video: ಬೈಕ್ ನಲ್ಲಿ ಬಂದು 20 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ದರೋಡೆಕೋರರು

Advertisement

Udayavani is now on Telegram. Click here to join our channel and stay updated with the latest news.

Next