Advertisement

ಸರಕಾರ ಸಾರಿಗೆ ನೌಕರರ ಪರವಾಗಿದೆ ಎನ್ನುವುದಕ್ಕೆ ಇಂದಿನ ನಿರ್ಧಾರವೇ ಸಾಕ್ಷಿ : ಪ್ರಭು ಚವ್ಹಾಣ್

07:29 PM Dec 13, 2020 | sudhir |

ಬೆಂಗಳೂರು : ಆರ್ಥಿಕ ಸಂಕಷ್ಟದಲ್ಲೂ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇಡಿಸಲು ಒಪ್ಪಿಗೆ ಸೂಚಿಸಿದ್ದು ಸರ್ಕಾರ ನೌಕರರ ಪರ ಇರುವುದಕ್ಕೆ ಸಾಕ್ಷಿ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೋವಿಡ್ ಸಮಯದಲ್ಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಸಾರಿಗೆ ಸಚಿವರು ನೌಕರರ ಕುಟುಂಬಗಳು ತೊಂದರೆಗೆ ಒಳಗಾಗಬಾರದೆಂದು ಆರ್ಥಿಕ ಸಂಕಷ್ಟದಲ್ಲೂ ವೇತನವನ್ನು ಬೀಡುಗಡೆ ಮಾಡಿ ಮಾನವೀಯತೆ ಮೇರೆದಿದ್ದರು.

ಕೋವಿಡ್ ಸಂಕಷ್ಟದಿಂದ ಸರ್ಕಾರ ಸಾಕಷ್ಟು ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಹಣಕಾಸಿನ ಸಂಪನ್ಮೂಲದ ಕ್ರೂಢಿಕರಣ ಸಮಸ್ಯೆ ವಿಚಾರ ಸಾರಿಗೆ ನೌಕರರ ಗಮನಕ್ಕೂಬಂದಿದೆ. ಇಂತಹ ಸಮಯದಲ್ಲೂ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು ಸಂತಸದ ವಿಚಾರ ಹಾಗಾಗಿ ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ;ಸಾರಿಗೆ ನೌಕರರೊಂದಿಗೆ ಸರ್ಕಾರದ ಸಂಧಾನ ಸಕ್ಸಸ್ : ಇಂದಿನಿಂದಲೇ ಬಸ್ ಸಂಚಾರ ಆರಂಭ

ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರನ್ನು ಎರಡು ಗುಂಪುಗಳಾಗಿ ಮಾಡಿ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡು ಪ್ರತಿಭಟನೆಯನ್ನು ಮಾಡಿದ್ದಾರೆ. ತಮ್ಮದಲ್ಲದ ಹೋರಾಟದ ಚುಕ್ಕಾಣಿ ಹಿಡಿದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಹಸಿರು ಸೇನೆ ಅಧ್ಯಕ್ಷ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕರದ ವಿರುದ್ಧ ಸಾರಿಗೆ ನೌಕರರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next