Advertisement

ಕುರಿಗಾರರ ಅಭಿವೃದ್ದಿಗೆ ರೂ.350 ಕೋಟಿ ಘೋಷಿಸಿದ ಮುಖ್ಯಮಂತ್ರಿಗೆ ಪ್ರಭು ಚವ್ಹಾಣ್ ಅಭಿನಂದನೆ

08:18 PM Oct 30, 2022 | Team Udayavani |

ಬೆಂಗಳೂರು: ಕುರಿಗಾರರು ಆಕಸ್ಮಿಕ, ಅಕಾಲಿಕ ನಿಧನ ಹೊಂದಿದರೆ ವಿಮಾ ಸೌಲಭ್ಯ ಯೋಜನೆಯಡಿ ಕುರಿ ಸಾಕಾಣಿಕೆದಾರರ ಸಮಗ್ರ ಅಭಿವೃದ್ಧಿಗಾಗಿ ಸುಮಾರು 350 ಕೋಟಿ ರೂ.ಗಳ ಮೀಸಲಿಟ್ಟು ಅಮೃತ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್‌ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕುರಿಗಾರರು ಆಕಸ್ಮಿಕ, ಅಕಾಲಿಕ ನಿಧನ ಹೊಂದಿದರೆ ವಿಮಾ ಸೌಲಭ್ಯ ಯೋಜನೆಯಡಿ ಅವರ ಕುಟುಂಬದ ಅವಲಂಬಿತರಿಗೆ ರೂ.5 ಲಕ್ಷ ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತಂದು ಬಿಜೆಪಿ ಹಿಂದುಳಿದ ವರ್ಗದ ಅಭಿವೃದ್ಧಿಯೇ ಗುರಿ ಎನ್ನುವುದನ್ನು ನಿರೂಪಿಸಿದೆ ಎಂದರು.

ಹಿಂದುಳಿದ ಸಮುದಾಯ ಪ್ರತಿನಿಧಿಸುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುರಿಗಾರರ ಅಭಿವೃದ್ಧಿಗೆ ಸ್ಪಂದಿಸಲಿಲ್ಲ. ನಮ್ಮ ಸರ್ಕಾರ ಕುರಿಗಾರರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.  ಕುರಿಗಳು ಅಕಾಲಿಕ ಸಾವನ್ನಪ್ಪಿದರೆ ಅನುಗ್ರಹ ಯೋಜನೆಯಡಿ ಪ್ರತಿ ಕುರಿಗೆ ರೂ.5 ಸಾವಿರ ಪರಿಹಾರ ನೀಡುತ್ತಿರುವುದು ಸರ್ವ ಜನರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.

ಕುರಿ ಸಾಕಾಣಿಕೆದಾರರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಿಂದ ಅಮೃತ ಸ್ವಾಭಿಮಾನಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳನ್ನು ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ‌ಉತ್ಪಾದಕರ ಸಹಕಾರ ಸಂಘಗಳಲ್ಲಿನ‌ 20000 ಪ್ರತಿ ಫಲಾನುಭವಿಗೆ ರೂ.1.75ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ರೈತರಿಗೆ ಇದೊಂದು ಲಾಭದಾಯಕ ಯೋಜನೆಯಾಗಿದೆ. ಗೋಹತ್ಯೆ ನಿಷೇಧದ ನಂತರ ಈ ಯೋಜನೆ ಪ್ರಾಮುಖ್ಯತೆ ಹೆಚ್ಚಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಭು ಚವ್ಹಾಣ್ ಕರೆ ನೀಡಿದ್ದಾರೆ.

ಮೂಕ ಪ್ರಾಣಿಗಳ ಮನದ ಮಾತು ಅರಿತ ಗೋಪ್ರೇಮಿ ಮುಖ್ಯಮಂತ್ರಿ ಬೊಮ್ಮಾಯಿ ಪಶುಸಂಗೋಪನೆ ಇಲಾಖೆಯನ್ನು ಹಿಂದೆಂದು ಕಂಡರಿಯದಂತೆ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ ಎನ್ನುವುದನ್ನು ಅವರು ಜಾರಿಗೆ ತಂದಿರುವ ಜನಪರ ಯೋಜನೆಗಳು ತಿಳಿಸುತ್ತವೆ ಎಂದರು.

Advertisement

ಯೋಜನೆಗಳಾದ ಜಿಲ್ಲೆಗೊಂದು ಗೋಶಾಲೆಗಳ ಸಂಖ್ಯೆಯನ್ನು 100ಕ್ಕೆ ಏರಿಕೆ, 100 ಪಶು ಚಿಕಿತ್ಸಾಲಯಗಳು, ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಗೋಮಾತಾ ಸಹಕಾರ ಸಂಘ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ, ಹಾವೇರಿ ಹೈಟೆಕ್ ಮೆಗಾ ಡೈರಿ, ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲೀಕರುಗಳಿಗೆ ಪರಿಹಾರ ಧನ ವಿತರಣೆ, ಉಚಿತ ಚಿಕಿತ್ಸೆ ಮತ್ತು ಲಸಿಕೆ ನೀಡಿಕೆ, 400 ಪಶು ವೈದ್ಯರು, 250 ಪಶು ವೈದ್ಯ ಸಹಾಯಕರ ನೇಮಕ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತರುವ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರಭು ಚವ್ಹಾಣ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3ರಿಂದ 6 ತಿಂಗಳ ವಯಸ್ಸಿನ ಕುರಿ, ಮೇಕೆಗಳು ನೀಡುವ ಪರಿಹಾರ ಧನವನ್ನು 2,500 ರಿಂದ 3,500ಕ್ಕೆ ಹೆಚ್ಚಿಸಲಾಗಿದೆ. ಕುರಿಗಾರರಿಗೆ ಮನೆ ನಿರ್ಮಾಣ ಸೇರಿದಂತೆ ಕುರಿಗಾರರಿಗೆ ಅನೇಕ ಸವಲತ್ತುಗಳನ್ನು ನೀಡಿ ಸಬಲರನ್ನಾಗಿಸಿ ಆರ್ಥಿಕ ಮಟ್ಟವನ್ನು ಸುಧಾರಿಸುವ ಮೂಲಕ ರೈತರ ಸಮಸ್ಯೆಗಳನ್ನು ಪಕಿಹಕಿಸಲು ಬಿಜೆಪಿ ಸರ್ಕಾರ ಪಣತೊಟ್ಟು ಅಭಿವೃದ್ಧಿ ಮಾರ್ಗದಲ್ಲಿ ಸಾಗುತ್ತಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next