ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ರಾಧೆ ಶ್ಯಾಮ್ ಚಿತ್ರವು ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿದ್ದವು.
ಡಾರ್ಲಿಂಗ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋನಲ್ಲಿ ಏಪ್ರಿಲ್ 1ರಿಂದ ರಾಧೆಶ್ಯಾಮ್ ಚಿತ್ರ ನೋಡಬಹುದಾಗಿದೆ.
ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದಾಗಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್ ಸಂಸ್ಥೆಗಳುನಿರ್ಮಿಸಿದ್ದವು. ಬಾಕ್ಸ್ ಆಫೀಸ್ ನಲ್ಲಿ ನೀರಸ ಪ್ರದರ್ಶನ ತೋರಿದ್ದ ರಾಧೆಶ್ಯಾಮ್ ಚಿತ್ರದ ಬಜೆಟ್ 350 ಕೋಟಿ ರೂ. ಆದರೆ ಚಿತ್ರ ಗಳಿಸಿದ್ದು 214 ಕೋಟಿ ರೂ ಮಾತ್ರ.
ಇದನ್ನೂ ಓದಿ:ಸೂಪರ್ ಸ್ಟಾರ್ ಗಳು ಬಿಡುಗಡೆ ಮಾಡಲಿದ್ದಾರೆ ವಿಕ್ರಾಂತ್ ರೋಣ ಟೀಸರ್
Related Articles
ಚಿತ್ರದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ ಜೊತೆಗೆ ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಜಗಪತಿ ಬಾಬು, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ಧಿ ಕುಮಾರ್, ಸಾಶಾ ಚೆಟ್ರಿ, ಸತ್ಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.