ಬೆಂಗಳೂರು: ಪರಭಾಷೆ ಸಿನಿಮಾ ಮಂದಿ ಕನ್ನಡ ಚಿತ್ರರಂಗಕ್ಕೆದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು (ಜೂ.4) ಜನ್ಮದಿನದ ಸಂಭ್ರಮ.
ಉಗ್ರಂ ಖ್ಯಾತಿಯ ಈ ನಿರ್ದೇಶಕನ ಹುಟ್ಟುಹಬ್ಬಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತದೆ. ಸ್ಯಾಂಡಲ್ ವುಡ್ ಹಿರಿಯ-ಕಿರಿಯ ಕಲವಾವಿದರು ಪ್ರಶಾಂತ್ ನೀಲ್ ಅವರಿಗೆ ವಿಶ್ ಮಾಡುತ್ತಿದ್ದಾರೆ.
ಪ್ರಶಾಂತ್ ನೀಲ್ ಜನ್ಮದಿನ ಪ್ರಯುಕ್ತ ಟ್ವೀಟ್ ಮಾಡಿರುವ ಜ್ಯೂ. ಎನ್ಟಿಆರ್ ಅವರು ತಮ್ಮ ಎಕ್ಸೈಟ್ಮೆಂಟ್ ಹಂಚಿಕೊಂಡಿದ್ದಾರೆ. ‘ಜನ್ಮದಿನದ ಶುಭಾಶಯಗಳು ಸಹೋದರನೇ. ಎಂದಿನಂತೆ ಅದ್ಭುತವಾಗಿರಿ. ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿದ್ದಾರೆ.
ಜ್ಯೂನಿಯರ್ ಎನ್ ಟಿ ಆರ್ ಅವರ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಘಟಾನುಘಟಿಗಳಿಬ್ಬರ ಕಾಂಬಿನೇಷನ್ನ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಯಾವಾಗ ಈ ಸಿನಿಮಾ ಸೆಟ್ಟೇರಲಿದೆಯೋ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.
ಮತ್ತೊಬ್ಬ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅವರು ಕೂಡ ಪ್ರಶಾಂತ್ ನೀಲ್ ಅವರಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನು ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಪರಭಾಷೆ ಮಂದಿ ಕೂಡ ಅವರ ಜೊತೆ ಕೆಲಸ ಮಾಡಲು ಕಾದು ಕುಳಿತಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ಪ್ರಶಾಂತ್ ನೀಲ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಸೋಶಿಯಲ್ ಮೀಡಿಯಾ ಮೂಲಕವೇ ಎಲ್ಲರೂ ಅವರಿಗೆ ಶುಭ ಕೂರುತ್ತಿದ್ದಾರೆ.