Advertisement

ಹಾಕಿ: ಶ್ರೀಜೇಶ್‌, ರಾಣಿ ನಾಯಕರು

06:00 AM Apr 28, 2018 | |

ಹೊಸದಿಲ್ಲಿ: ಈ ವರ್ಷದ ಅಂತ್ಯದವರೆಗೆ ಭಾರತೀಯ ಪುರುಷ ಮತ್ತು ವನಿತಾ ತಂಡದ ನಾಯಕರಾಗಿ ಅನುಕ್ರಮವಾಗಿ ಪಿಆರ್‌ ಶ್ರೀಜೇಶ್‌ ಮತ್ತು ರಾಣಿ ಅವರು ಮುಂದುವರಿಯಲಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ.

Advertisement

ಗಾಯದಿಂದ ಕೆಲ ಸಮಯ ವಿಶ್ರಾಂತಿ ಪಡೆದ ಬಳಿಕ ಶ್ರೀಜೇಶ್‌ ನಾಯಕತ್ವಕ್ಕೆ ಮರಳಿದ್ದರೆ ರಾಣಿ 2018ರಲ್ಲಿ ನಡೆಯುವ ಎಲ್ಲ ಕೂಟಗಳಿಗೆ ತನ್ನ ನಾಯಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಜಕಾರ್ತದಲ್ಲಿ ನಡೆಯುವ 18ನೇ ಏಶ್ಯನ್‌ ಗೇಮ್ಸ್‌ ಮತ್ತು ಜುಲೈಯಲ್ಲಿ ಜರಗುವ ಹಾಕಿ ವನಿತಾ ವಿಶ್ವಕಪ್‌ ಇದರಲ್ಲಿ ಸೇರಿದೆ. 2016ರ ಎಫ್ಐಎಚ್‌ ಚಾಂಪಿಯನ್ಸ್‌ ಟ್ರೋಫಿ ವೇಳೆ ಶ್ರೀಜೇಶ್‌ಗೆ ನಾಯಕತ್ವ ವಹಿಸಲಾಗಿತ್ತು. ಭಾರತ ಈ ಕೂಟದಲ್ಲಿ ಐತಿಹಾಸಿಕ ಬೆಳ್ಳಿಯ ಪದಕ ಜಯಿಸಿತ್ತು. ಜೂನಿಯರ್‌ ಹಾಕಿ ತಂಡದ ಜವಾಬ್ದಾರಿಯನ್ನು ಕೂಡ ಶ್ರೀಜೇಶ್‌ ವಹಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next