ಮಂಗಳೂರು/ ಉಡುಪಿ: ಉಡುಪಿ ಸೇರಿದಂತೆ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. ಅಲ್ಲದೆ “ವಾತ್ಸಲ್ಯ’ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಉಡುಪಿಗೆ ಗುರು ವಾರ ಭೇಟಿ ನೀಡಿದ ಅವರು, ಈ ಪಟ್ಟಿಯಲ್ಲಿ ಮೊದಲ ಹೆಸರು ಉಡುಪಿ ಎಂದರು. ಹೀಗಾಗಿ ಉಡುಪಿಯಲ್ಲಿ ಸರಕಾರಿ ವೈದ್ಯ ಕಾಲೇಜಿನ ಬದಲು ಪಿಪಿಪಿ ಮಾದರಿಯದು ಸ್ಥಾಪನೆಯಾಗಲಿದೆ.
ಕರಾವಳಿ ಬೇಡಿಕೆ: ಸಭೆ ನಡೆಸಲು ಸಮ್ಮತಿ :
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ನೆಲೆಯಲ್ಲಿ ಉದಯವಾಣಿ ಸಿದ್ಧ ಪಡಿ ಸಿರುವ ಬೇಡಿಕೆಗಳ ಬಗ್ಗೆ ಕರಾವಳಿಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿ ಆದ್ಯತೆಯ ಮೇರೆಗೆ ಯೋಜನೆ ಕೈಗೆತ್ತಿ ಕೊಳ್ಳ ಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಅವಿಭಜಿತ ದ.ಕನ್ನಡದ ಬೇಡಿಕೆಗಳ ಬಗ್ಗೆ “ಉದಯ ವಾಣಿ’ ಪ್ರಕಟಿಸಿದ ವರದಿಯನ್ನು ಸಿಎಂ ಮಂಗಳೂರಿನಲ್ಲಿ ಗಮನಿಸಿ ಪ್ರತಿಕ್ರಿಯಿಸಿದರು.