Advertisement

PPP ನಾಯಕ ಜರ್ದಾರಿ 2ನೇ ಬಾರಿ ಪಾಕಿಸ್ಥಾನ ಅಧ್ಯಕ್ಷ

01:05 AM Mar 10, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ ಪೀಪಲ್ಸ್‌ ಪಕ್ಷದ ನಾಯಕ ಆಸಿಫ್ ಅಲಿ ಜರ್ದಾರಿ ಪಾಕಿಸ್ಥಾನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪಾಕಿಸ್ಥಾನದಲ್ಲಿ 2 ಬಾರಿ ಅಧ್ಯಕ್ಷ ಗಾದಿ ಏರಿದ ಹಿರಿಮೆಗೆ ಜರ್ದಾರಿ ಪಾತ್ರರಾಗಿ­ದ್ದಾರೆ. ಪಾಕ್‌ ಸಂಸತ್‌ನ ಕೆಳಮನೆ ನ್ಯಾಶನಲ್‌ ಅಸೆಂಬ್ಲಿಯ ಹೊಸ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಜರ್ದಾರಿ ಅವರಿಗೆ 225 ಮತಗಳು ಪ್ರಾಪ್ತವಾದವು. ಅವರ ಪ್ರತಿಸ್ಪರ್ಧಿ 119 ಮತಗಳನ್ನು ಪಡೆದರು.

Advertisement

ಇದುವರೆಗೆ ಪಾಕಿಸ್ಥಾನದ ಅಧ್ಯಕ್ಷರಾಗಿದ್ದ ರಶೀದ್‌ ಅಳ್ವಿ ಅವರ ಅಧಿಕಾರದ ಅವಧಿ 1 ವರ್ಷದ ಹಿಂದೆಯೇ ಮುಕ್ತಾಯವಾಗಿತ್ತು. ರಾಜಕೀಯ ಕಾರಣಗಳಿಂದಾಗಿ ಅಳ್ವಿ ಅಧಿಕಾರದ ಅವಧಿ ವಿಸ್ತರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next