Advertisement

ಕ್ರೀಡೆಯಿಂದ ಉತ್ಸಾಹ ಹೆಚ್ಚಳ: ಡಾ.ಅಶ್ವತ್ಥ್ ನಾರಾಯಣ

09:50 AM Nov 25, 2019 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್ ಮಿಡಿಯಾ ಪೊಲಿಟಿಕಲ್ ರಿಪೋರ್ಟರ್ ಗಳು ಒಟ್ಟಾಗಿ ಆಯೋಜಿಸಿದ್ದ ಪಿಪಿಎಲ್ ( ಪೊಲಿಟಿಕಲ್ ಪ್ರಿಮಿಯರ್ ಲೀಗ್) ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ರವೀಶ್ ನೇತೃತ್ಬದ ಬೆಂಗಳೂರು ಬುಲ್ಸ್ ತಂಡ ಜಯಶಾಲಿಯಾಗಿದೆ.

Advertisement

ನಗರದ ಶ್ರೀ ಬಾಲಗಂಗಾಧರ ನಾಯಿ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಪಿಪಿಎಲ್ ( ಪೊಲಿಟಿಕಲ್ ಪ್ರಿಮಿಯರ್ ಲೀಗ್) ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಎಲಕ್ಟ್ರಾನಿಕ್ ಮಿಡಿಯಾಗಳ ಪೊಲಿಟಿಕಲ್ ರಿಪೋರ್ಟರ್ ಗಳ ನಾಲ್ಕು ತಂಡಗಳು ಲೀಗ್ ನಲ್ಲಿ ಪಾಲ್ಗೊಂಡಿದ್ದವು.

ಲೀಗ್ ಹಂತದಲ್ಲಿ ಆನಂದ್ ಬೈದನಮನೆ ನಾಯಕತ್ವದ ನೈಟ್ ರೈಡರ್ಸ್ ತಂಡವನ್ನು ರವೀಶ್ ನಾಯಕತ್ವದ ಬೆಂಗಳೂರು ಬುಲ್ಸ್ ಹಾಗೂ ನ. ವಿನಯ್ ನಾಯಕತ್ವದ ಸೂಪರ್ ಸುನಾಮಿ ತಂಡವನ್ನು ಚಿದಾನಂದ ಪಟೇಲ್ ನಾಯಕತ್ವದ ಪೀಪಲ್ಸ್ ಚೊಯಿಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.

ಫೈನಲ್ ನಲ್ಲಿ ಪೀಪಲ್ಸ್ ಚೊಯಿಸ್ ತಂಡವನ್ನು ೮ ರನ್ ಗಳಿಂದ ಸೋಲಿಸಿ ಬೆಂಗಳೂರು ಬುಲ್ಸ್ ತಂಡ ಟ್ರೋಪಿ ಎತ್ತಿ ಹಿಡಿಯಿತು.

ಮೂರನೇ ಸ್ಥಾನಕ್ಕಾಗಿ ನಡೆದ ಆಟದಲ್ಲಿ ನೈಟ್ ರೈಡರ್ಸ್ ತಂಡ ಸೂಪರ್ ಸುನಾಮಿ ತಂಡವನ್ನು ಸೋಲಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಟೂರ್ನಾಮೆಂಟ್ ಗೆ ಚಾಲನೆ ನೀಡಿ ಮಾತನಾಡಿ, ಸುದ್ದಿ ಸಂಗ್ರಹಿಸುವ ಧಾವಂತದಲ್ಲಿ ವರದಿಗಾರರು ವಿಶ್ರಾಂತಿ ಇಲ್ಲದ ಜೀವನ ನಡೆಸುತ್ತಿರುತ್ತಾರೆ. ಎಲ್ಲ ವರದಿಗಾರರು ಒಂದೆಡೆ ಸೇರಿ ಕ್ರೀಡೆ ಆಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕ್ರೀಡೆ ಯಾವಾಗಲೂ ಉತ್ಸಾಹವನ್ನು ಹೆಚ್ಚಿಸುತ್ತದೆ. ಕ್ರೀಡೆಯ ಮೂಲಕ ಸಹಬಾಳ್ವೆಯ ಸಂದೇಶ ಸಾರುತ್ತಿರುವುದು ಮೆಚ್ಚುವಂಥದ್ದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ಗಣೇಶ್ ಶೆಟ್ಟಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next