Advertisement
ಶುಗರ್ ಸ್ಕಲ್ಪರ್ ಅಕಾಡೆಮಿಯಿಂದ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಮರ್ಪಿಸುವ ಹಿನ್ನೆಲೆಯಲ್ಲಿ ಅವರ ಪ್ರತಿಮೆ ಯನ್ನು ಕೇಕ್‌ನಿಂದ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಕೇಕ್ ರಚನಾಕಾರ ಸ್ಯಾಮಿ ಜೆ. ರಾಮಚಂದ್ರನ್ ತಿಳಿಸಿದರು. ಈ ಪುತ್ಥಳಿಯನ್ನು ಸುಮಾರು 150 ಕೆಜಿ ಚಾಕೋ ಲೇಟ್, ಸಕ್ಕರೆ, ಅಡಿಬಲ್ ಕಲರ್ ಬಳಸಿಕೊಂಡು, ಮೂರು ಅಡಿ ಉದ್ದ, ಅಗಲ ಮತ್ತು ಎತ್ತರದ ಪ್ರತಿಮೆಯನ್ನು 15 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿ ಗಳೊಂದಿಗೆ ತಯಾರಿಸಲಾಗಿದೆ. ಇದರೊಂದಿಗೆ ಕೇಕ್‌ಶೋಗೆ ಮತ್ತಷ್ಟು ಮೆರಗು ಬಂದಿದೆ. ಶೋಗೆ ಭೇಟಿ ನೀಡಿದವರು ತಮ್ಮ ನೆಚ್ಚಿನ ನಟನ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆಯುವುದು, ಕೇಕ್‌ನ ಚಿತ್ರಸೆರೆ ಹಿಡಿಯುವುದು ಸಾಮಾನ್ಯವಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನ ಪ್ರದರ್ಶನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂತು. Advertisement
ಕೇಕ್ ಶೋಗೆ ಪವರ್‌ಸ್ಟಾರ್ ಎಂಟ್ರಿ…!
11:55 AM Dec 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.