Advertisement

ಲಂಡನ್‌ನ ಮೆಟ್ರೋ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ

02:02 PM Sep 15, 2017 | Team Udayavani |

ಲಂಡನ್‌ : ನಗರದ ಪಶ್ಚಿಮ ಭಾಗದಲ್ಲಿರುವ ಪರ್ಸನ್ಸ್‌ ಗ್ರೀನ್‌ ಮೆಟ್ರೋ ನಿಲ್ದಾಣದ ಸುರಂಗ ಮಾರ್ಗದಲ್ಲಿ ಶುಕ್ರವಾರ  ಬಾಂಬ್‌ ಸ್ಫೋಟಗೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

Advertisement

ಸ್ಫೋಟವಾಗುತ್ತಿದ್ದಂತೆ ಸ್ಥಳದಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣ ಭೀತಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಪೊಲೀಸರು ಭದ್ರತಾ ಪಡೆಗಳು ದೌಡಾಯಿಸಿದ್ದು  ರಕ್ಷಣಾ ಕಾರ್ಯ ನಿರತರಾಗಿದ್ದಾರೆ. ಇಂಗ್ಲೆಂಡ್‌ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. 

ಪ್ರಾಥಮಿಕ ತನಿಖೆಯ ವೇಳೆ ಇದೊಂದು ಉಗ್ರ ದಾಳಿ ಎಂದು ಕಂಡು ಬಂದಿರುವುದಾಗಿ ಲಂಡನ್‌ ಪೊಲೀಸರು ತಿಳಿಸಿದ್ದಾರೆ.

 ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next