“ಚಿತ್ರಮಂದಿರಗಳ ಎಲ್ಲಾ ಸೀಟುಗಳು ಬೇಗನೇ ಭರ್ತಿಯಾಗಲಿ, ಎಲ್ಲರೂ ಭಯಬಿಟ್ಟು ಸಿನಿಮಾ ನೋಡುವಂತಾಗಲಿ. ಆ ದಿನಗಳಿಗೆ ನಾನು ಎದುರು ನೋಡುತ್ತಿದ್ದೇನೆ…’ – ಹೀಗೆ ಹೇಳಿ, ಮಧ್ಯೆ ಮಧ್ಯೆ ಗ್ಯಾಪ್ ಬಿಟ್ಟು ಕುಳಿತಿದ್ದ ಜನರತ್ತ ನೋಡಿದರು ಪುನೀತ್. ಹೌದು, ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಈ ತರಹದ ಒಂದು ಆಸೆ ಇದ್ದೇ ಇದು. ಕೆಲವೇ ಕೆಲವು ತಿಂಗಳ ಹಿಂದೆ ಯಾವುದೇ ಭಯವಿಲ್ಲದೇ, ತುಂಬಿದ ಚಿತ್ರಮಂದಿರಗಳಿಂದ ಪ್ರದರ್ಶನವಾಗುತ್ತಿದ್ದ ಸಿನಿಮಾಗಳು ಈಗ ಬಿಡುಗಡೆಗೆ ಹಿಂದೇಟು ಹಾಕುವಂತಾಗಿದೆ. ಕೋವಿಡ್ಎಂ ಬ ಮಹಾಮಾರಿ ಎಲ್ಲರನ್ನು ಇನ್ನಿಲ್ಲದಂತೆ ಭಯಗೊಳಿಸಿದೆ. ಆದರೆ, ಸಿನಿಮಾ ಮಂದಿಯಲ್ಲಿ ಆಶಾ ಭಾವ ಇದೆ.
ಅದಕ್ಕೆ ಪೂರಕವಾಗಿ ಜನ ಕೂಡಾಈಚಿತ್ರಮಂದಿರದತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಸೂಚಿಸಿದ ಶೇ 50 ಅಷ್ಟೇ ಸೀಟು ಭರ್ತಿ ನಿಯಮವಿದೆ.ಕೋವಿಡ್ ಕಡಿಮೆಯಾದರೆ ಆ ನಿಯಮವೂ ಬದಲಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರಮಂದಿರಗಳಲ್ಲಿ ಮತ್ತೆ ಹಳೆಯ ದಿನಗಳನ್ನು ನೋಡುವ ಆಸೆ.ಈ ಮೂಲಕ ಇಡೀ ಕನ್ನಡ ಚಿತ್ರರಂಗ ಮೊದಲಿನಂತಾಗಬೇಕೆಂಬ ಕಾಳಜಿ ಕೂಡಾ ಅವರದು.
“ನಿಧಾನವಾಗಿ ಪ್ರೇಕ್ಷಕರ ಸಿನಿಮಾ ಮಂದಿರಕ್ಕೆ ಬರುತ್ತಿದ್ದಾರೆ ಎಂಬ ವಿಷಯ ಕೇಳಿ ಖುಷಿಯಾಗುತ್ತಿದೆ. ಈ ಸಂಖ್ಯೆ ಹೆಚ್ಚಾಗಬೇಕು.ಕೋವಿಡ್ ಗೆ ಬೇಗನೇ ವ್ಯಾಕ್ಸಿನ್ ಬಂದು ಜನರು ಭಯಬಿಟ್ಟುಚಿತ್ರಮಂದಿರಕ್ಕೆ ಬರುವಂತಾಗಬೇಕು. ಈಗ ಒಂದು ಸೀಟಿನನಡುವೆ ಗ್ಯಾಪ್ ಬಿಟ್ಟು ಕುಳಿತುಕೊಳ್ಳುವ ಬದಲು ಶೇ100 ತುಂಬುವಂತಾಗಬೇಕು. ಹಾಗಂತ ನಾವು ಎಚ್ಚರ ತಪ್ಪಬಾರದು. ಮುಂಜಾಗ್ರತಾ ಕ್ರಮದೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾನೋಡಬೇಕು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂದಹಾಗೆ, ಪುನೀತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಡಿಯರ್ ಸತ್ಯ’ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ.ಸದ್ಯ ಪುನೀತ್ ರಾಜ್‌ಕುಮಾರ್ ಅವರ “ಯುವರತ್ನ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೂಲಗಳ ಪ್ರಕಾರ, ಚಿತ್ರ ಜನವರಿ 22 ರಂದು ತೆರೆಗೆ ಬರಲಿದೆ. ಈ ನಡುವೆಯೇ ಪುನೀತ್ ಅವರ “ಜೇಮ್ಸ್’ ಚಿತ್ರದ ಚಿತ್ರೀಕರಣವೂ ಆರಂಭವಾಗಿದೆ.