Advertisement

ನೆಲ ಮಾರ್ಗದಲ್ಲಿ  ವಿದ್ಯುತ್‌ ;ಮಲೆನಾಡ ಸಮಸ್ಯೆಗೆ ಎಚ್‌ಡಿಕೆ ಸೂತ್ರ 

06:00 AM Jul 11, 2018 | Team Udayavani |

ವಿಧಾನಸಭೆ: “ಮಲೆನಾಡು ಪ್ರದೇಶಗಳಲ್ಲಿ ಮಳೆ- ಗಾಳಿಯಿಂದ ವಿದ್ಯುತ್‌ ಕಂಬಗಳು ಉರುಳಿಬಿದ್ದು ಸಮಸ್ಯೆಯಾಗುವುದನ್ನು ತಪ್ಪಿಸಲು ನೆಲಮಾರ್ಗ
ದಲ್ಲಿ ವಿದ್ಯುತ್‌ ತಂತಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಶೃಂಗೇರಿ ಶಾಸಕ ರಾಜೇಗೌಡ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, “”ಈ ಭಾಗಗಳಲ್ಲಿ ವಿದ್ಯುತ್‌ ಕಂಬಗಳು ಉರುಳಿಬಿದ್ದು ದಿನಗಟ್ಟಲೆ ವಿದ್ಯುತ್‌ ಇಲ್ಲದಂತೆ ಆಗುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು ನೆಲಮಾರ್ಗದಲ್ಲಿ ತಂತಿ ಅಳವಡಿಕೆ ಸಾಧ್ಯವೇ ಎಂಬ
ಬಗ್ಗೆ ಪರಿಶೀಲಿಸಲಾಗುವುದು. ಈಗಾಗಲೇ ಮಳೆಯಿಂದ ಉರುಳಿಬಿದ್ದಿದ್ದ 721 ವಿದ್ಯುತ್‌ ಕಂಬಗಳ ಪೈಕಿ 680 ಕಂಬಗಳನ್ನು ಬದಲಾಯಿ ಸಲಾಗಿದೆ. 68.2 ಕಿ.ಮೀ. ದೂರ ವಿದ್ಯುತ್‌ ತಂತಿ ಸಹ ಅಳವಡಿಸಲಾಗಿದೆ ಎಂದು ತಿಳಿಸಿ ದರು. ಮಳೆಯಿಂದ ವಿದ್ಯುತ್‌ ಕಂಬಗಳು ಬಿದ್ದಾಗ ದುರಸ್ತಿ ಕೆಲಸ
ಕಷ್ಟಸಾಧ್ಯ”ಎಂದು ಹೇಳಿದರು. 

ಅರಣ್ಯ ಅಧಿಕಾರಿಗಳು ಬಾಗಿದ ಮರಗಳ ರೆಂಬೆ ಕಡಿಯಲೂ ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿಯ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಸಿ.ಟಿ.ರವಿ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಸಿಎಂ, “”ಮಲೆನಾಡಿನ ಜನ ಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಸಭೆ ಕರೆದು
ಚರ್ಚಿಸುತ್ತೇನೆ” ಎಂದು ಭರವಸೆ ನೀಡಿದರು.

ಮಲೆನಾಡಲ್ಲಿ ಕ್ಯಾಂಪ್‌: ಮಳೆಗಾಲದಲ್ಲಿ ಮಲೆನಾಡಿನ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ಅಧಿವೇಶನ ಮುಗಿದ ಬಳಿಕ ಎರಡು ದಿನಗಳ ಕಾಲ ಆ ಪ್ರದೇಶದಲ್ಲಿ ನಾನೇ ಖುದ್ದಾಗಿ ಕ್ಯಾಂಪ್‌ ಹಾಕುತ್ತೇನೆ. ಈ ರೀತಿಯ ಪರಿಸ್ಥಿತಿಗಳಿಗೆ ಯಾವ ರೀತಿಯ ಪರಿಹಾರ ಕಲ್ಪಿಸಬೇಕು ಎಂಬುದನ್ನು ತಿಳಿದು ಯೋಜನೆ ರೂಪಿಸುತ್ತೇನೆ ಎಂದರು.

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ
ಹೊನ್ನೇತಾಳು ಗ್ರಾ.ಪಂ. ವ್ಯಾಪ್ತಿಯ ದುಡ್ಲಿ ಮನೆ ಎಂಬಲ್ಲಿ ಸೋಮವಾರ ತಾಯಿ ಜತೆ ಹೋಗುತ್ತಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆಶಿಕಾ (15) ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಶೂನ್ಯ ವೇಳೆಯಲ್ಲಿ ಅರಗ ಜ್ಞಾನೇಂದ್ರ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, “”ಮಳೆಯಿಂದಾಗಿ ಮಲೆನಾಡಿನ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಕಂಡುಕೊಳ್ಳಲು ಈ ಸರ್ಕಾರ ತೀರ್ಮಾನಿಸಿದೆ. ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ನಾನೇ ಎರಡು ದಿನ ಆ ಭಾಗದಲ್ಲಿ ಕ್ಯಾಂಪ್‌ ಹಾಕಿ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಳ್ಳುತ್ತೇನೆ. ಮಕ್ಕಳು ಶಾಲೆಗೆ ಹೋಗಿ ಬರುವುದು ಸೇರಿದಂತೆ ಅಲ್ಲಿನ ಜನರಿಗೆ ಪರಿಹಾರ ಮತ್ತು
ಮೂಲ ಸೌಕರ್ಯ ಕಲ್ಪಿಸಲು ಸೂಕ್ತ ಆದೇಶ ಹೊರಡಿಸುತ್ತೇನೆ ಎಂದು ಭರವಸೆ ನೀಡಿದರು. 

Advertisement

ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ವಿತರಿಸುವ ಜತೆಗೆ ಶಿಕ್ಷಕರ ಅಭಿವೃದಿಟಛಿ ನಿಧಿಯಿಂದ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಅಲ್ಲದೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು ಎಂದು ಹೇಳಿದರು. ಜತೆಗೆ ಕಾಲುಸಂಕ ಅರ್ಧ ಕುಸಿದಿರುವುದರಿಂದ ಅದನ್ನು ಕೂಡಲೇ ದುರಸ್ತಿಗೊಳಿಸಬೇಕು ಮತ್ತು ಅದಕ್ಕೆ ತಡೆಗೋಡೆ ನಿರ್ಮಿಸಬೇಕು ಎಂದೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ರದ್ದುಗೊಳಿಸೋ ಪ್ರಸ್ತಾಪವಿಲ್ಲ 
ಹೊಸ ಅಥವಾ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳ ನೋಂದಣಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪಡೆಯಲಾಗುತ್ತಿರುವ 10 ಸಾವಿರ ರೂ. ಶುಲ್ಕ ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಯವರು ತಿಳಿಸಿದರು.  ಬಿಜೆಪಿಯ ರಾಜುಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ವಿದ್ಯುತ್‌ ಸಂಪರ್ಕ ಕಲ್ಪಿಸಲು ಒಂದು ಲಕ್ಷ ರೂ.ವರೆಗೆ ವೆಚ್ಚ ಆಗುತ್ತಿದೆ. ಆದರೆ, ಹತ್ತು ಸಾವಿರ ರೂ. ಮಾತ್ರ ರೈತರ ಬಳಿ ಮೂಲಸೌಕರ್ಯ ರಚನೆ ಶುಲ್ಕ ಎಂದು ಪಡೆಯಲಾಗುತ್ತಿದೆ. ಇದನ್ನು ತೆಗೆದುಹಾಕುವ ಪ್ರಸ್ತಾವನೆ ಇಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next