ಯಾದಗಿರಿ: ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ಪ್ರೇಮಿ ದಿ. ವಿದ್ಯಾಧರ ಗುರೂಜಿ ಅವರ 106ನೇ ಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಶಿಕ್ಷಣ ಪ್ರೇಮಿಗಳು ಹಾಗೂ ಹೈ.ಕ ವಿಮೋಚನೆಗಾಗಿ ಮತ್ತು 371 (ಜೆ) ಕಲಂ ಜಾರಿ ಆಗಲು ಲಿಂ. ವಿಶ್ವನಾಥರಡ್ಡಿ ಮುದ್ನಾಳ, ವೈಜನಾಥ ಪಾಟೀಲ ಸೇರಿದಂತೆ ಹಲವಾರು
ಮಹನೀಯ ರೊಂದಿಗೆ ಹೋರಾಟ ಮಾಡಿದ ವಿದ್ಯಾಧರ ಗೂರುಜಿ ಅವರು ಕೇವಲ ವ್ಯಕ್ತಿಯಾಗಿರದೆ ಹೈ.ಕ ಭಾಗದ
ಶಕ್ತಿಯಾಗಿ ಬೆಳೆದಿದ್ದರು ಎಂದರು.
ಗುರುಮಿಠಕಲ್‌ನಿಂದ ನಡೆದು ಕೊಂಡು ಬಂದು ಯಾದಗಿರಿಯ ರೇಲ್ವೆ ನಿಲ್ದಾಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಭೇಟಿಯಾದವರು. ಅಲ್ಲದೆ ವೀರ ಸೇನಾನಿಗಳಾದ ಭಗತಸಿಂಗ ರಾಜಗೂರು , ಸುಖ ದೇವ , ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಅಪ್ಪಟ ಅಭಿಮಾನಿಯಾಗಿದ್ದರು ಎಂದರು.
ಸಮಾರಂಭದಲ್ಲಿ ರಾಮಯ್ಯ ಶಾಬಾದಿ , ಶ್ರೀನಿವಾಸರಾವ ಜೋಶಿ, ಕೃಷ್ಣವೇಣಿ, ಮಾತನಾಡಿದರು. ಗುಂಡುರಾವ ಪಂಚಾತ್ರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಬಸಂತರಾಯಗೌಡ ಮಾಲೀಪಾಟೀಲ, ಸಿದ್ರಾಮಣ್ಣ ಆಶನಾಳ, ಮಲ್ಲಣ್ಣ ಕಡೇಚೂರ ನಾಗೇಂದ್ರ ಜಾಜಿ, ಚಂದ್ರಶೇಖರ ಕಾಡ್ಮೂರ, ಪ್ರಕಾಶ ಅಲ್ಲಿಪುರ,
ಬಸವರಾಜ ಪಾಟೀಲ, ಸಾಹೇಬರಡ್ಡಿ ನಾಯ್ಕಲ, ಅರುಣ ದೋರನಹಳ್ಳಿ, ಸುನೀಲ, ಶಶಿಕಲಾ ಪಾಟೀಲ ಇದ್ದರು.
ಸುಜಾತಾ ನಾಯಕ ಸ್ವಾಗತಿಸಿದರು. ಅನೀಲ ಗುರುಜೀ ವಂದಿಸಿದರು.