Advertisement
ಸಂಶೋಧನೆಯ ಪ್ರಕಾರ ಆರರಿಂದ ಏಳು ಗಂಟೆಗಳ ನಿದ್ದೆಯೊಂದಿಗೆ ಪವರ್ ನ್ಯಾಪ್ ತೆಗೆದುಕೊಳ್ಳುವುದರಿಂದ ಹೃದಯದ ಕಾಯಿಲೆಗಳ ಅಪಾಯ ಶೇ. 40ರಷ್ಟು ಕಡಿಮೆಯಾಗುತ್ತದೆ. ರಾತ್ರಿಯ ನಿದ್ದೆ ಪೂರ್ಣಗೊಳ್ಳದಿದ್ದರೆ ಅಥವಾ ಆರರಿಂದ ಏಳು ಗಂಟೆಗಳ ನಿದ್ದೆಯನ್ನು ಮಾತ್ರ ನೀವು ಮಾಡಿದ್ದರೆ ಪವರ್ ನ್ಯಾಪ್ ಮೊರೆ ಹೋಗಬಹುದು. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಮೈಗ್ರೇನ್, ರಕ್ತದೊತ್ತಡ ಮತ್ತು ಒತ್ತಡದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ರಾತ್ರಿ ನಿದ್ದೆ ಮಾಡುವಾಗ ನಾವು ನಿದ್ದೆಯ ಕನಿಷ್ಠ 4 ಚಕ್ರಗಳನ್ನು ಪೂರ್ಣಗೊಳಿಸಬೇಕು. ನಿದ್ದೆಯ ಒಂದು ಚಕ್ರ ಎಂದರೆ 90 ನಿಮಿಷಗಳು, ಆದ್ದರಿಂದ ನಿದ್ದೆಯ 4 ಚಕ್ರಗಳನ್ನು ಪೂರ್ಣಗೊಳಿಸಲು ನಾವು ಆರು ಗಂಟೆಗಳ ಕಾಲ ನಿದ್ದೆ ಮಾಡಬೇಕಾಗುತ್ತದೆ. ಆರು ಗಂಟೆಗಳ ನಿದ್ದೆಯ ಹಿಂದಿನ ವಿಜ್ಞಾನ ಇದಾಗಿದೆ. ವಾಸ್ತವವಾಗಿ ನಮ್ಮ ನಿದ್ದೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಎನ್‌ಆರ್‌ಎಂಇ (ನಾನ್ ರಾಪಿಡ್ ಐ ಮೂವ್‌ಮೆಂಟ್) ಹಂತ ಮತ್ತು ಆರ್‌ಇಎಂ (ರಾಪಿಡ್ ಐ ಮೂವ್‌ಮೆಂಟ…) ಹಂತ. ಎನ್‌ಆರ್‌ಎಂಇ ಸಹ ಮೂರು ಉಪ-ಹಂತಗಳನ್ನು ಹೊಂದಿದೆ. ಪವರ್ ನ್ಯಾಪ್ ಎಂದರೇನು?
ನೀವು ಹಗಲಿನ ಹೊತ್ತಲ್ಲಿ 10ರಿಂದ 15 ನಿಮಿಷ ಅಥವಾ ಅರ್ಧ ಗಂಟೆಯ ವರೆಗೆ ನಿ¨ªೆ ಮಾಡುವುದಾದರೆ ಅದನ್ನು ಪವರ್ ನ್ಯಾಪ್ ಎಂದು ಕರೆಯಲಾಗುತ್ತದೆ. ಅಂದರೆ ಪವರ್ ನ್ಯಾಪ್ ಎನ್ನುವುದು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಹಗಲಿನಲ್ಲಿ ತೆಗೆದುಕೊಳ್ಳುವ ಸಣ್ಣ ನಿದ್ದೆ. ನೀವು ಎಷ್ಟೇ ಬ್ಯುಸಿ ಶೆಡ್ನೂಲ್‌ನಲ್ಲಿದ್ದರೂ 15 ನಿಮಿಷಗಳ ನಿದ್ದೆ ನಿಮಗೆ ಹೆಚ್ಚು ತಾಜಾತನ ಮತ್ತು ಶಕ್ತಿಯನ್ನು ತುಂಬುತ್ತದೆ. ಇತ್ತೀಚೆಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಪತ್ತೆಯಾಗಿದೆ. 30 ನಿಮಿಷಗಳ ಪವರ್ ನ್ಯಾಪ್ ಜನರ ಉತ್ಪಾದಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನ ವರದಿ ತಿಳಿಸಿದೆ.
Related Articles
ಇದು ಹೃದ್ರೋಗ ಅಥವಾ ಆಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಇದು ನಮ್ಮ ಉತ್ಪಾದನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಾಸಾ ಹೇಳಿದೆ. ಪವರ್ ನ್ಯಾಪ್‌ನ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
Advertisement
- ಪವರ್ ನ್ಯಾಪ್ ತೆಗೆದುಕೊಳ್ಳುವುದರಿಂದ ದೇಹಕ್ಕೆ ವಿರಾಮ ಸಿಗುತ್ತದೆ. ಈ ಸಮಯದಲ್ಲಿ ದೇಹವು ಶಕ್ತಿಯನ್ನು ಪುನಃ ಸಂಗ್ರಹಿಸಲು ಅವಕಾಶ ಲಭಿಸುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
– ಇಡೀ ದಿನ ಕೆಲಸ ಮಾಡುವುದರಿಂದ ಮೆದುಳು ಆಯಾಸಗೊಳ್ಳುತ್ತದೆ. ಅಂದರೆ ನಾವು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಕೂಡ ದಣಿದಿದ್ದೇವೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ಕಿರು ನಿದ್ದೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ನಮ್ಮ ಸ್ಮರಣೆಯನ್ನು ಬಲಪಡಿಸುತ್ತದೆ.
– ಸಂಶೋಧನೆಯ ಪ್ರಕಾರ ಹೃದಯ ಸಂಬಂಧಿತ ಕಾಯಿಲೆಗಳು ಮತ್ತು ಹೃದಯಾಘಾತದ ಅಪಾಯವನ್ನು ಶೇ. 40ರಷ್ಟು ಕಡಿಮೆ ಮಾಡುತ್ತದೆ.
– ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪವರ್ ನ್ಯಾಪ್ ಸಮಯದಲ್ಲಿ ನಮ್ಮ ದೇಹವು ವಿಶ್ರಾಂತಿ ಕ್ರಮದಲ್ಲಿರುವಾಗ ಅನಂತರ ರೋಗ ನಿರೋಧಕ ಕೋಶಗಳು ಹೆಚ್ಚು ಅಭಿವೃದ್ಧಿ ಹೊಂದುತ್ತವೆ.