Advertisement

ಸಂಘಟನೆಯಿಂದ ಸಮಾಜಕ್ಕೆ ಶಕ್ತಿ: ಎಚ್ಕೆ

06:07 PM Aug 17, 2022 | Team Udayavani |

ಮುಂಡರಗಿ: ಕೃಷಿ ಉದ್ಯೋಗವೆಂದು ಅವಲಂಬಿತವಾಗಿರುವಂತಹ ರಡ್ಡಿ ಸಮಾಜವು ರಾಜ್ಯದಲ್ಲಿ ಸಣ್ಣ ಸಮುದಾಯವಾಗಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕಾ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್‌ ಕಮೀಟಿ ವತಿಯಿಂದ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸಾರೋಹಣ ಹಾಗೂ ಶಿವಪ್ಪ ಮೇಟಿ ಸಮುದಾಯ ಭವನ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಡ್ಡಿ ಸಮಾಜದ ಮಹಾತ್ಮರಾದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ತತ್ವ ಆದರ್ಶಗಳ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಆ ತತ್ವಗಳಲ್ಲಿ ವಿಶ್ವದ ಮನುಕುಲಕ್ಕೆ ವೇಮನು ಮಾರ್ಗದರ್ಶನಾಗಿದ್ದಾನೆ. ಅಂತಹ ವಂಶಜರಾದ ರಡ್ಡಿ ಜನಾಂಗವು ಉದ್ಯೋಗದಲ್ಲಿ ಕೃಷಿಕರಾಗಿದ್ದಾರೆ. ಸ್ವಾಭಿಮಾನದಿಂದ ಎಲ್ಲರೂ ಸಂಘಟಿತರಾದಾಗ ಸಮಾಜಕ್ಕೆ ಶಕ್ತಿ ಹಾಗೂ ಸಾಮರ್ಥ್ಯ ಬರುತ್ತದೆ.

ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡಾ ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸರಳವಾಗಿ ಸಮುದಾಯ ಭವನ ಕಟ್ಟಬಹುದು. ಅದಕ್ಕೆ ವಿಧಾನ ಪರಿಷತ್ತಿನ ಸದಸ್ಯರು, ಬೇರೆ ಶಾಸಕರ, ಸಚಿವರು, ಸಂಸದರನ್ನು ಸಂಪರ್ಕಿಸಿ ಅವರ ಮೂಲಕ 25 ಲಕ್ಷ ರೂ. ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ 2025 ಸಾಲಿನ ವೇಮನ ಜಯಂತಿಗೆ ಭವನ ಉದ್ಘಾಟನೆ ಮಾಡುವುದಕ್ಕೆ ಸಮಾಜದ ಮುಖಂಡರು ಮುಂದಾಗಬೇಕು ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲಕೇರಿ ವಿರುಪಾಪುರ ಗುರು ಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ರಾಯಬಾಗದ ಲಡ್ಡು ಮುತ್ಯಾ ಸಾನ್ನಿಧ್ಯ ವಹಿಸಿದ್ದರು.

Advertisement

ಡಾ| ಬಸವರಾಜ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಿ.ಆರ್‌. ಯಾವಗಲ್‌, ಎಸ್‌.ಎಸ್‌. ಪಾಟೀಲ, ಮಾಜಿ ಶಾಸಕರಾದ ಡಿ.ಆರ್‌. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್‌. ಗಡ್ಡದೇವರ ಮಠ, ಜಿ.ವೀರಪ್ಪ, ವಿರುಪಾಕ್ಷಪ್ಪ ಸಂಗನಾಳ, ವಾಸಣ್ಣ ಕುರಡಗಿ, ಎಸ್‌.ಬಿ. ನಾಗರಳ್ಳಿ, ಅಂದಾನಪ್ಪ ಮೇಟಿ, ಎಸ್‌.ಸಿ. ಡಂಬಳ, ಪ್ರಭು ಹೆಬ್ಟಾಳ, ರವಿ ಮೂಲಿಮನಿ, ಹೇಮಂತಗೌಡ ಪಾಟೀಲ, ಸಿ.ಬಿ. ಚನ್ನಳ್ಳಿ, ವ್ಹಿ.ಟಿ. ಮೇಟಿ, ಎ.ಬಿ. ಚನ್ನಳ್ಳಿ ಬಾಬು, ಹನಮಂತಗೌಡ
ಪಾಟೀಲ, ಚನ್ನಪ್ಪ ತಾಂಬ್ರಗುಂಡಿ, ಸುರೇಶ ಅಬ್ಬಿಗೇರಿ, ಉಮೇಶ ಚನ್ನಳ್ಳಿ, ಅಂದಪ್ಪ ಗಡ್ಡದ, ವಿಶ್ವನಾಥಗೌಡ ಪಾಟೀಲ, ಶಿವಾನಂದ ಚಾಕಲಬ್ಬಿ, ಗುರುಪುತ್ರಪ್ಪ ಸಂಶಿ, ಪ್ರಲ್ಹಾದಗೌಡ ಮೂಗನೂರು, ರಾಮಚಂದ್ರ ಕಲಾಲ್‌, ಶಿವಪ್ಪ ಚಿಕ್ಕಣ್ಣನವರ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ವಿರುಪಾಕ್ಷಪ್ಪ ತಾಂಬ್ರಗುಂಡಿ, ರಾಮಪ್ಪ ನಾಗನೂರು, ಈರಣ್ಣ ಜೋಬಾಳಿ, ಶೋಭಾ ಮೇಟಿ ಮತ್ತಿತರರು ಪಾಲ್ಗೊಂಡಿದ್ದರು. ಸೋಮರಡ್ಡಿ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಮೇಟಿ ಸ್ವಾಗತಿಸಿದರು. ಕಲ್ಮೇಶ ಕಳಕರಡ್ಡಿ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next