Advertisement

ವಿದ್ಯುತ್‌ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ: ಸಿಎಂ ಬೊಮ್ಮಾಯಿ ಭರವಸೆ

09:48 PM Mar 06, 2023 | Team Udayavani |

ಬೆಂಗಳೂರು: ಆದಷ್ಟು ಬೇಗ ವಿದ್ಯುತ್‌ ಇಲಾಖೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ಬೆಸ್ಕಾಂ ಸೋಮವಾರ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ಕಟ್ಟಡ’ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಒಟ್ಟು 17 ಹೊಸ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಧನ ಇಲಾಖೆ ಸಿಬ್ಬಂದಿಗಳು ಬಹಳ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಬಹಳ ವರ್ಷಗಳಿಂದ ಸಿಬ್ಬಂದಿಗಳ ವೇತನ ಪರಿಷ್ಕರಣೆ ಆಗಿಲ್ಲ. ಅದು ಆಗಬೇಕು ಎಂಬುವುದು ನಮ್ಮ ಆಶಯ. ಆ ಹಿನ್ನೆಲೆಯಲ್ಲಿ ಈಗಾಗಲೇ ಇಂಧನ ಸಚಿವರ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲೆ ನಿಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆರ್ಥಿಕ ನಷ್ಟದಲ್ಲಿ ಎಸ್ಕಾಂಗಳು: ಸರ್ಕಾರ ಸುಮಾರು 16 ಸಾವಿರ ಕೋಟಿ ರೂ.ವಿದ್ಯುತ್‌ ಸಬ್ಸಿಡಿ ನೀಡಿದ್ದರೂ ಎಸ್ಕಾಂಗಳು ನಷ್ಟದಲ್ಲಿವೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಇಂಧನ ಕ್ಷೇತ್ರಕ್ಕೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಎಸ್ಕಾಂ ಹಾಗೂ ಕರ್ನಾಟಕ ವಿದ್ಯುತ್‌ ನಿಗಮಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಬೇಸಿಗೆಯಲ್ಲಿ ವಿದ್ಯುತ್‌ ನಿರ್ವಹಣೆ ಹಾಗೂ ಸಿದ್ಧತೆ, ವಿದ್ಯುತ್‌ ಉತ್ಪಾದನೆ ಹಾಗೂ ಸಂಗ್ರಹಣೆ ಮಾಡುವುದು ಹಾಗೂ ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡಿ 2500 ಕೋಟಿ ರೂ.ಲಾಭಾಂಶವನ್ನು ಪಡೆಯಲಾಗಿದೆ ಎಂದರು.

ಇಂಧನ ಕ್ಷೇತ್ರದಲ್ಲಿ ರಾಜಕೀಯ: ವಿದೇಶಿ ಕಲ್ಲಿದ್ದಲು ತರಿಸಿ ಅದನ್ನು ಸ್ಥಳೀಯ ಕಲ್ಲಿದ್ದಲು ಜತೆ ಬೆರೆಸಿ ಬಳಸಲು ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಯಿತು. ಪೂರಕವಾದ ಇಂಧನ ನೀತಿ ಇರದ ಕಾರಣ ವಿದ್ಯುತ್‌ ಇಲಾಖೆಯನ್ನು ಪೊಲಿಟಿಕಲ್‌ ಪವರ್‌ ಬಳಸಿ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ, ವಿದ್ಯುತ್‌ ಕ್ಷೇತ್ರದಲ್ಲಿ ನಷ್ಟ ಅನುಭವಿಸುವಂತಾಯಿತು ಎಂದು ದೂರಿದರು.

Advertisement

ಇಂಧನ ಇಲಾಖೆ ಸ್ಕಾಡಾವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಸ್ಕಾಡಾ ಇದ್ದುದರಿಂದ ಸುಮಾರು 200 ಕಿ.ಮೀ. ಜಾಲದ್ದು, ಸ್ಕಾಡಾ-2 ಗೆ ಅನುಮತಿ ನೀಡಲಾಗಿದೆ. ಇದನ್ನು ಮೇಲ್ದಜೇìಗೇರಿಸುವುದರಿಂದ ದಕ್ಷತೆ ಹೆಚ್ಚಾಗಲಿದೆ. ಇದರ ಜತೆಗೆ ನವೀಕರಿಸಬಹುದಾದ ಇಂಧನವನ್ನು ಹೆಚ್ಚು ಬಳಸಿ ಪಂಪ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮವಹಿಸಿದೆ. ಶರಾವತಿ ಯೋಜನೆಯನ್ನು ಪಂಪ್‌ ಸ್ಟೋರೇಜ್‌ ಅಡಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇಂಧನ ಸಚಿವ ಸುನೀಲ್‌ ಕುಮಾರ್‌, ಶಾಸಕ ಹಾಗೂ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಸತೀಶ್‌ ರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್‌ ಬೀಳಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುಮ್ಮನೆ 200 ಯೂನಿಟ್‌ ವಿದ್ಯುತ್‌ಅನ್ನು ಉಚಿತ ಕೊಡುತ್ತೇವೆಂದು ಹೇಳುವುದರಲ್ಲಿ ಏನು ಅರ್ಥ ಇದೆ? ಇಂಧನ ಕ್ಷೇತ್ರದಲ್ಲಿ ಪವರ್‌ ಪಾಲಿಟಿಕ್ಸ್‌ ಮಾಡಬಾರದು.
-ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next