ಚಿಂತಾಮಣಿ : ವಿದ್ಯುತ್ ಬಿಲ್‌ಕಟ್ಟದ ಪರಿಣಾಮ ಮೂರು ದಿನಗಳಿಂದ ಮುರಗಮಲ್ಲಾ ನಾಡ ಕಚೇರಿಗೆ ವಿದ್ಯುತ್ ಕಡಿತ ಮಾಡಿರುವುದು ವರದಿಯಾಗಿದೆ.
ಒಂದು ವರ್ಷದಿಂದ ಬಿಲ್ ಪಾವತಿ ಇಲ್ಲಾ, ಇನ್ನು ನಾಡ ಕಛೇರಿ ಒಂದು ವರ್ಷದಿಂದ ಹತ್ತು ಸಾವಿರಕ್ಕೂ ಹೆಚ್ಚು ಬಿಲ್ ಬಾಕಿ ಇಟ್ಟು ಕೊಂಡಿರುವುದರಿಂದ ಬೆಸ್ಕಾಂ ಇಲಾಖೆ ಮೂರು ದಿನಗಳಿಂದ ವಿದ್ಯುತ ಸಂಪರ್ಕ ಕಡಿತ ಮಾಡಲಾಗಿದೆ.
ವಿದ್ಯಾರ್ಥಿಗಳ ಪರದಾಟ : ಇನ್ನು ಕಳೆದ ಮೂರು ದಿನಗಳಿಂದ ನಾಡಕಛೆರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ, ಪಿಂಚಣಿ ಆರ್ಜಿದಾರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಪರದಾಡುವಂತಾಗಿದೆ.
ಇದನ್ನೂ ಓದಿ : ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್
ಇನ್ನು ವಿದ್ಯುತ್ ಕಡಿತ ಮಾಡಿ ಮೂರು ದಿನ ಕಳೆದರೂ ಇದುವರೆಗೂ ಬಿಲ್ ಪಾವತಿ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಸಾಕ್ಷಿಯಾಗಿದೆ. ನಾಡ ಕಛೇರಿಗೆ ಪ್ರತಿದಿನ ನೂರಾರು ಜನರು ವಿವಿಧ ಕಾರ್ಯಗಳಿಗೆ ಬೇಟಿ ಕೋಡುತ್ತಿದ್ದು ದಿನನಿತ್ಯ ಜನಜಂಗುಲಿಯಿಂದ ಗಿಜಗುಡುತ್ತಿದ್ದು ನಾಡಕಛೆರಿ ಮೂರು ದಿನಗಳಿಂದ ಬಿಕೊ ಎನ್ನುವಂತಾಗಿದೆ. ಅಷ್ಟೆ ಅಲ್ಲದೆ ಕಛೆರಿ ಮುಂದೆ ಮೇಕೆಕುರಿಗಳು ಮಳಗುವಂತಾಗಿದೆ.