Advertisement

ಕಲ್ಲಿದ್ದಲು ಪೂರೈಕೆಗೆ 756 ರೈಲು ಸೇವೆ ರದ್ದು: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

12:17 AM Apr 30, 2022 | Team Udayavani |

ಹೊಸದಿಲ್ಲಿ: ಒಂದಲ್ಲ ಎರಡಲ್ಲ ಬರೋಬ್ಬರಿ 756 ರೈಲುಗಳು ರದ್ದು. ದೇಶದಲ್ಲಿನ ವಿದ್ಯುತ್‌ ಸ್ಥಾವರ ಗಳಿಗೆ ಅಬಾಧಿತವಾಗಿ ಕಲ್ಲಿದ್ದಲು ಪೂರೈಸಲೆಂದೇ ವಿಶೇಷ ರೈಲುಗಳ ಸುಗಮ ಸಂಚಾರಕ್ಕೆ ಮಾಡಿರುವ ವ್ಯವಸ್ಥೆ ಇದು.

Advertisement

ಈ ವ್ಯವಸ್ಥೆಯಡಿ 363 ಎಕ್ಸ್‌ಪ್ರೆಸ್‌ ಸೇವೆಗಳು, 393 ಪ್ಯಾಸೆಂಜರ್‌ ಸೇವೆಗಳು ಸೇರಿವೆ ಎಂದು ಶುಕ್ರವಾರ ಹೊಸದಿಲ್ಲಿ ಯಲ್ಲಿ ರೈಲ್ವೇ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ನೈಋತ್ಯ ರೈಲ್ವೇ ವಲಯದ ಅಧಿಕಾರಿಗಳು, ನಮ್ಮ ವ್ಯಾಪ್ತಿ ಯಲ್ಲಿ ಯಾವುದೇ ರೈಲು ರದ್ದಾಗಿಲ್ಲ ಎಂದಿದ್ದಾರೆ.

ಉತ್ತರ ಭಾರತದ ಹಲವೆಡೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಅದರಿಂದಾಗಿ ಕೆಲವೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ. ಪರಿಸ್ಥಿತಿ ಕೈಮೀರದಿರಲು ಕಲ್ಲಿದ್ದಲು ಗಣಿಗಳಿಂದ ವಿದ್ಯುತ್‌ ಉತ್ಪಾದನ ಸ್ಥಾವರ ಗಳಿಗೆ ಅತ್ಯಂತ ತ್ವರಿತವಾಗಿ ಕಲ್ಲಿದ್ದಲು ಪೂರೈಸಲು ದೇಶದ ವಿವಿಧೆಡೆಯ 756 ರೈಲು ಸೇವೆಗಳನ್ನು ರದ್ದು ಪಡಿಸಲಾಗಿದೆ. ಉತ್ಪಾದನ ಸ್ಥಾವರಗಳಿಗೆ ಕ್ಷಿಪ್ರವಾಗಿ ಕಲ್ಲಿದ್ದಲು ಪೂರೈಸಲು ರೈಲ್ವೇ ಇಲಾಖೆ ಕೈಗೊಂಡ ಕ್ರಮ ಮುಂದಿನ 2 ತಿಂಗಳುಗಳಿಗೆ ಅನ್ವಯವಾಗಲಿದೆ.

ತಾತ್ಕಾಲಿಕ ಕ್ರಮ
ಬಿಸಿ ವಾತಾವರಣ ತಹಬಂದಿಗೆ ಬರುತ್ತಿರು ವಂತೆಯೇ ರೈಲುಗಳ ಸೇವೆ ಪುನರಾರಂಭವಾಗಲಿದೆ ಎಂದು ಭಾರತೀಯ ರೈಲ್ವೇಯ ಕಾರ್ಯನಿರ್ವಾಹಕ ನಿರ್ದೇ ಶಕ ಗೌರವ ಕೃಷ್ಣ ತಿಳಿಸಿದ್ದಾರೆ. ದಿಲ್ಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್‌ ಮತ್ತು ಬಿಹಾರದ ಇಂಧನ ಸಚಿವ ಬಿಜೇಂದ್ರ ಪ್ರಸಾದ್‌ ಯಾದವ್‌ ಅವರು ತಮ್ಮ ತಮ್ಮ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್‌ ಉತ್ಪಾದನೆಗೆ ಧಕ್ಕೆಯಾಗಿದೆ ಎಂದಿದ್ದಾರೆ.

Advertisement

ರಾಜ್ಯಗಳಲ್ಲಿನ ವಿದ್ಯುತ್‌ ಕೊರತೆಗೆ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯವೇ ಕಾರಣ ಎಂದು ಕೇಂದ್ರ ಇಂಧನ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ದಿಲ್ಲಿಯಲ್ಲಿ ಹೆಚ್ಚಿದ ತಾಪಮಾನ
ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ತಾಪಮಾನ 46 ಡಿಗ್ರಿ ಸೆಲಿÏಯಸ್‌ ಗಿಂತ ಹೆಚ್ಚಾಗಿದೆ. ದಿಲ್ಲಿಯಲ್ಲಿ ಇದುವರೆಗೆ ಎಪ್ರಿಲ್‌ನಲ್ಲಿ ಸರಾಸರಿ 45 ಡಿಗ್ರಿ ಸೆಲಿÏಯಸ್‌  ತಾಪಮಾನವಿರುತ್ತಿತ್ತು. 1941ರ ಎ. 29 ರಂದು ರಾಷ್ಟ್ರ ರಾಜಧಾನಿಯಲ್ಲಿ 45.6 ಡಿಗ್ರಿ ಸೆಲಿÏಯಸ್‌ ತಾಪಮಾನ ದಾಖಲಾಗಿತ್ತು. ಹರಿಯಾಣ, ಪಂಜಾಬ್‌, ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಝಾರ್ಖಂಡ್‌, ವಿದರ್ಭ ಪ್ರದೇಶಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next