Advertisement

Sandalwood: ʼಪೌಡರ್ʼನಿಂದ ಬಂತು ಮೊದಲ ಹಾಡು

03:34 PM Jul 10, 2024 | Team Udayavani |

ಬಹುತಾರಾಗಣದ “ಪೌಡರ್‌’ ಚಿತ್ರ ಆಗಸ್ಟ್‌ನಲ್ಲಿ ತೆರಕಾಣಲಿದ್ದು, ಇತ್ತೀಚೆಗೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

Advertisement

“ಮಿಷನ್‌ ಘಮ ಘಮ…’ ಎಂಬ ತನ್ನ ಮೊದಲ ಗೀತೆಯನ್ನು ಬಿಡುಗಡೆ ಮಾಡಿದೆ ತಂಡ. ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮತ್ತು ಗಾಯಕ ಎಂ.ಸಿ.ಬಿಜ್ಜು ಅವರ ಕಾಂಬಿನೇಷನ್‌ ಅಲ್ಲಿ ಮೂಡಿ ಬಂದಿರುವ ಮೊದಲ ಗೀತೆ ಇದಾಗಿದೆ.

ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್‌.ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಪೌಡರ್‌ ಹಿಂದಿನ ರಹಸ್ಯ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಉತ್ತರ ದೊರೆಯಲಿದೆ.

ದಿಗಂತ್‌ ಮಂಚಾಲೆ, ಧನ್ಯ ರಾಮ್‌ ಕುಮಾರ್‌, ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿರುವ ಚಿತ್ರಕ್ಕೆ ಜನಾರ್ದನ್‌ ಚಿಕ್ಕಣ್ಣ ಆಕ್ಷನ್‌ ಕಟ್‌ ಹೇಳಿದ್ದು, ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್, ವಿಜಯ್‌ ಸುಬ್ರ ಹ್ಮಣ್ಯಂ ನಿರ್ಮಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next