Advertisement

ಪೊವಾಯಿ ಎಸ್‌ಎಂ ಶೆಟ್ಟಿ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ

03:46 PM Jun 09, 2019 | Vishnu Das |

ಮುಂಬಯಿ: 2018-2019ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿಯ ಎಸ್‌. ಎಂ. ಶೆಟ್ಟಿ ಹೈಸ್ಕೂಲ್‌ಗೆ ಸತತ 17ನೇ ಬಾರಿಗೆ ಶೇ. 100 ಫಲಿತಾಂಶ ಲಭಿಸಿದೆ.

Advertisement

ಪರೀಕ್ಷೆಗೆ ಹಾಜರಾದ 181 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಶೇ. 90ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದರೆ, 107 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 58 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿಹಾ ಸಂತೋಷ್‌ ತ್ರಿಬಂಕ್ಕಾರ್‌ ಅವರು ಶೇ. 93.40 ಮತ್ತು ಇಶಿಕಾ ಪಿ. ಕೊಟ್ಟಾರಿ ಅವರು ಶೇ. 93.40 ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾದರೆ, ದಿಯಾ ನವೀನ್‌ ರೈ ಅವರು ಶೇ. 93.20 ಅಂಕಗಳನ್ನು ಗಳಿಸಿ ದ್ವಿತೀಯ ಹಾಗೂ ಶ್ರದ್ಧಾ ಶೇಖರ್‌ ಶೆಟ್ಟಿ ಅವರು ಶೇ. 92 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.

ರಕ್ಷಿತಾ ಶಶಿಧರ ಶೆಟ್ಟಿ ಅವರು ಶೇ. 91.40, ರಿಯಾ ಮಿಲಿಂದ್‌ ಅವರು ಶೇ. 91.20, ಅರ್ಥವ್‌ ಜ್ಯೋತಿ ಅವರು ಶೇ. 90.40, ಶ್ರೇಯಾ ಸಂತೋಷ್‌ ಕುಮಾರ್‌ ಅವರು ಶೇ. 90.20, ಹರ್ಷಿತಾ ರಮೇಶ್‌ ಅವರು ಶೇ. 90.20 ಹಾಗೂ ಹೃದಯ್‌ ಬಿಜು ಅವರು ಶೇ. 90 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅತ್ಯಧಿಕ ಅಂಕಗಳೊಂದಿಗೆ ಸತತ 17ನೇ ಬಾರಿ ಶೇ. 100 ಫಲಿತಾಂಶ ಬರಲು ಶ್ರಮಿಸಿದ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬಂದಿಗಳು ಹಾಗೂ ಪಾಲಕರನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಇತರ ಪದಾಧಿಕಾರಿಗಳು, ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next