Advertisement

ಕಾಯಿಮಲೆ: ಅಡಿಕೆ ಮರದ ಸಂಕದಲ್ಲಿ ಅಪಾಯಕಾರಿ ಸಂಚಾರ ನಿತ್ಯಸಂಚಾರ

06:00 AM Jun 28, 2018 | |

ಮುಳ್ಳೇರಿಯ: ಬೆಳ್ಳೂರು ಪಂಚಾಯತ್‌ ವ್ಯಾಪ್ತಿಯ ಕಾಯಿಮಲೆಯಲ್ಲಿರುವ ಕಾಲುಸಂಕ ಅಪಾಯಕಾರಿ ಯಾಗಿದ್ದು, ಪೆರ್ವತ್ತೋಡಿಯಿಂದ ಕಾಯಿಮಲೆ ತೆರಳುವ ಹಾದಿಯಲ್ಲಿನ ಈ ಕಾಲ್ಸೇತುವೆಯು ದುರಂತವನ್ನು ಆಹ್ವಾನಿಸುವಂತಿದೆ.

Advertisement

ಈ ದಾರಿಯಿಂದಾಗಿ ದಿನ ನಿತ್ಯ 20ರಷ್ಟು ಮುಗ್ಧ ಕಂದಮ್ಮಗಳು ಪೆರುವತ್ತೋಡಿಯಿಂದ ಬೆಳ್ಳೂರು, ಅಗಲ್ಪಾಡಿ, ಬೆಳಿಂಜ, ಬದಿಯಡ್ಕ ಶಾಲೆಗಳಿಗೆ ಅದೇ ರೀತಿ ವಿರುದ್ಧವಾಗಿ ಕಾಯಿಮಲೆಯಿಂದ ಪನೆಯಾಲ, ವಾಣೀನಗರ ಶಾಲೆಗಳಿಗೆ ಈ ಕಾಲ್ಸೇತುವೆಯ ಮೂಲಕ ತೆರಳಬೇಕಾಗಿದೆ. ಸಣ್ಣ ಮಕ್ಕಳನ್ನು ಪೋಷಕರು ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಸೇತುವೆ ದಾಟಿಸಲು ಜತೆಗೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ


ಸೇತುವೆಯ ಒಂದು ಭಾಗ ಪಂಚಾಯಿತಿಯ 11 ನೇ ವಾರ್ಡ್‌ ಕಾಯಿಮಲೆ, ಇನ್ನೊಂದು ಭಾಗ 12ನೇ ವಾರ್ಡ್‌ ಪೆರ್ವತ್ತೋಡಿ  ವ್ಯಾಪ್ತಿಯಲ್ಲಿ ಒಳಗೊಂಡಿದೆ. 

ಪೆರ್ವತ್ತೋಡಿಯಿಂದ ಬೀಜದ ಕಟ್ಟೆ ಹಾದಿಯಾಗಿ ಬದಿಯಡ್ಕ ಹಾಗೂ ಮುಳ್ಳೇರಿಯಾ ತಲಾ 12 ಕಿ.ಮೀ, ಕಿನ್ನಿಂಗಾರು, ನಾಟೆಕಲ್ಲು ತಲಾ ಮೂರು ಕಿ.ಮೀ. ದೂರವಿದೆ.

ಕಚೇರಿಗಳಿವೆ
ಕಿನ್ನಿಂಗಾರ್‌ನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್‌, ಗ್ರಾಮ ಕಚೇರಿ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿಭವನಗಳಿದ್ದರೆ ಬೆಳ್ಳೂರು ನಲ್ಲಿ ಪಂಚಾಯತ್‌ ಕಚೇರಿ, ಸಹಕಾರಿ ಬ್ಯಾಂಕ್‌ ಹಾಗೂ  ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಆಯುರ್ವೇದ ಆಸ್ಪತ್ರೆಗಳಿವೆ. 

ಬೆಳಿಂಜದಲ್ಲಿ ಪ್ರಾಥಮಿಕ ಶಾಲೆಯೂ ಇದೆ. ಇಲ್ಲಿನ ಜನರು ದಿನ ನಿತ್ಯ ವ್ಯವಹಾರಗಳಿಗೆ ಕಿನ್ನಿಂಗಾರು, ನಾಟೆಕಲ್ಲು, ಬದಿಯಡ್ಕ, ಮುಳ್ಳೇರಿಯಾ ಪೇಟೆಗಳನ್ನು ಆಶ್ರಯಿಸುತ್ತಿದ್ದು ಎರಡೂ ಭಾಗದ ಜನರು ಕಿ.ಮೀ. ಗಟ್ಟಲೆ ಸುತ್ತಿ ಬಳಸಿ ಹೋಗಬೇಕಾದ ದುಸ್ಥಿತಿ ಉಂಟಾಗಿದೆ.

Advertisement

ಸೇತುವೆಯ ಎರಡೂ ಭಾಗಗಳಲ್ಲಿ ಕೆಲವೇ ಮೀಟರ್‌ ದೂರದಲ್ಲಿ ರಸ್ತೆ ಇದೆ. ಇಲ್ಲಿ ಸಂಪರ್ಕ ಸೇತುವೆ ನಿರ್ಮಾಣ ವಾದಲ್ಲಿ ಎರಡೂ ಭಾಗಗಳಿಗೆ ವಾಹನದ ಮೂಲಕ ತೆರಳಲು ನಾಲು Rಕಿ.ಮೀ ನಷ್ಟು ದೂರ ಉಳಿಸಬಹುದಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕಾಯಿಮಲೆಯಿಂದ ಬೆಳಿಂಜ- ಅಗಲ್ಪಾಡಿ ಹಾದಿಯಾಗಿ ಮತ್ತು ಪೊಡಿಪ್ಪಳ್ಳ-ನಾರಂಪಾಡಿ ಯಾಗಿ ಬಸ್‌ ಸೌಕರ್ಯವಿದೆ. 
ಎಲ್ಲ ಭಾಗಗಳ ವಿವಿಧ  ವಿದ್ಯಾಸಂಸ್ಥೆಗಳಿಗೆ ಸೇರಿದ ಬಸ್‌ ಗಳು ವಿದ್ಯಾರ್ಥಿಗಳನ್ನು ಕರೆ ದೊಯ್ಯಲು ಕಾಯಿಮಲೆ ತನಕ ಬರುತ್ತಿವೆ.

ಶಾಶ್ವತ ಸೇತುವೆ  ನಿರ್ಮಾಣಕ್ಕೆ ಅಡ್ಡಿ 
ಸ್ಥಳೀಯರು ಸ್ವಂತ ಖರ್ಚಿನಲ್ಲಿ ಪಂಚಾಯಿತಿ ಸದಸ್ಯೆ ಸುಜಾತಾ ಎಂ ರೈ ಅವರ ನೇತƒತ್ವದಲ್ಲಿ  ಸಮಗ್ರ ಯೋಜನಾ ವರದಿ (ಡಿಪಿಆರ್‌),ಅಂದಾಜು ಲೆಕ್ಕ ಪಟ್ಟಿ ತಯಾರಿಸಿದ್ದರೂ ಫಲ ಇಲ್ಲದಾ ಗಿದೆ. ಮನವಿಯ ಅನ್ವಯ  ನೀರಾವರಿ ಇಲಾಖೆ, ನಬಾರ್ಡ್‌ ಅಧಿಕಾರಿಗಳು  ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸೇತುವೆಯ ಇಕ್ಕಡೆ ಗಳಲ್ಲಿ ಖಾಸಗೀ ಒಡೆತನದ ಅಡಿಕೆ ತೋಟಗಳಿದ್ದು ಭೂ ಮಾಲಕರಲ್ಲಿ  ಸ್ಥಳ ದಾನದ ಕುರಿತಾಗಿ ಒಮ್ಮತದ ಅಭಿಪ್ರಾಯ ಮೂಡದೇ ಇರುವುದೇ ಶಾಶ್ವತ ಸೇತುವೆ  ನಿರ್ಮಾಣಕ್ಕೆ ಅಡ್ಡಿ ಯಾಗಿರುವುದಾಗಿ ಸ್ಥಳೀಯರು ಹೇಳುತ್ತಾರೆ

ಶಾಶ್ವತ ಪರಿಹಾರ ಅಗತ್ಯ
ತೋಡಿನಲ್ಲಿ ನೆರೆ ಉಕ್ಕಿ ಬರುತ್ತಿದ್ದು  ನಡೆದು ಹೋಗುವ ಹಾದಿಯಲ್ಲೂ  ಅಲ್ಲಲ್ಲಿ ಮಣ್ಣಿನ ಸವಕಳಿ ಉಂಟಾ ಗಿದೆ.ಆ ಭಾಗಗಳಲ್ಲಿ ಕಂಗನ್ನು ಜೋಡಿಸಿಡಲಾಗಿದೆ.ಇದಕ್ಕೆಲ್ಲಾ ಶಾಶ್ವತ ಪರಿಹಾರ ಅಗತ್ಯ
– ಪ್ರೀತಂ ರೈ ಸ್ಥಳೀಯ ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next