Advertisement
ಪ್ರಸ್ತಾವದಲ್ಲೇನಿದೆ?ಇದರಂತೆ ಜಿಲ್ಲೆಯ ಒಂದೆರಡು ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಿಸಬೇಕು. ಪ್ರತಿ ಗ್ರಾಮವೆಂದರೆ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 22 ಬಿಪಿಎಲ್ ಕಾರ್ಡುದಾರರು ಫಲಾನುಭವಿಗಳಾಗಬಹುದು. ಇದರಲ್ಲಿ 20 ಮಂದಿ ಸಾಮಾನ್ಯರು, ಇಬ್ಬರು ಪರಿಶಿಷ್ಟ ಜಾತಿಯವರು. ಒಟ್ಟು ಘಟಕ ವೆಚ್ಚ 52,000 ರೂ. ಇದರಲ್ಲಿ 22,500 ರೂ. ಮೊತ್ತದ ಗೂಡು, 20 ಕೋಳಿಗಳಿಗೆ ತಲಾ 360 ರೂ.ನಂತೆ 7,200 ರೂ., ಕೋಳಿ ಆಹಾರ (ಲೇಯರ್ ಮ್ಯಾಷ್) 42 ಕೆ.ಜಿ.ಯಷ್ಟು 52 ವಾರದವರೆಗೆ ಪೂರೈಕೆಗೆ ಒಂದು ಕೋಳಿಗೆ ಒಂದು ಕೆ.ಜಿ.ಗೆ 25 ರೂ.ನಂತೆ 21,000 ರೂ., ಔಷಧೋಪಚಾರ ಮತ್ತು ಲಸಿಕೆಗೆ 1,300 ರೂ. ಎಂದು ನಿಗದಿಪಡಿಸಲಾಗಿದೆ. ಸಾಮಾನ್ಯ ಫಲಾನುಭವಿಗಳಿಗೆ 26,000 ರೂ. ಸಬ್ಸಿಡಿ ದೊರಕಿದರೆ, ಪರಿಶಿಷ್ಟ ಜಾತಿ ಯವರಿಗೆ ಶೇ.90 ಸಬ್ಸಿಡಿ ದೊರಕುತ್ತದೆ.
ಮಹಾಮಂಡಳಿಯವರು ಯೋಜನೆ ರೂಪಿಸುವಾಗ ಒಂದು ಮೊಟ್ಟೆಗೆ 7 ರೂ. ಸಿಗುತ್ತದೆ ಎಂದು ತೋರಿಸಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 6.50 ರೂ.ಗೆ ಗ್ರಾಹಕರಿಗೆ ದೊರಕುತ್ತದೆ. ಕ್ರಿಸ್ಮಸ್‌ನಂತಹ ಹಬ್ಬದ ವೇಳೆಯೂ ಗ್ರಾಹಕರಿಗೆ 7 ರೂ.ನಲ್ಲಿ ಸಿಕ್ಕಿತ್ತು. ಆದರೆ ಇದೇ ಬೆಲೆ ಮೊಟ್ಟೆ ಉತ್ಪಾದಕನಿಗೆ ಸಿಗುವುದಿಲ್ಲ. ಪ್ರಸ್ತಾವದಲ್ಲಿ 310 ಮೊಟ್ಟೆಗಳ ಇಳುವರಿಯನ್ನು ಪರಿ ಗಣಿಸಲಾಗಿದ್ದರೆ, ಎಲ್ಲ ಕೋಳಿಗಳು ಇಷ್ಟು ಇಳುವರಿಗಳನ್ನು ಕೊಡುವು ದಿಲ್ಲ. ಕೋಳಿಗಳು ದಿನವೂ ಮೊಟ್ಟೆ ಇಡುವುದಿಲ್ಲ. ಫಲಾನುಭವಿಗಳನ್ನು ಗುರುತಿಸಿದ ಬಳಿಕ ಬ್ಯಾಂಕ್‌ನವರು ಸಾಲ ಕೊಡಲು ಮುಂದಾಗಬೇಕು. ಮಾರುಕಟ್ಟೆಗೆ ಮೊಟ್ಟೆಗಳನ್ನು ಮಾರಲು ಅನುಕೂಲವಾಗುವಂತೆ ಪಟ್ಟಣಕ್ಕೆ ಹತ್ತಿರವಿರುವ ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ. ಈ ಎಲ್ಲ ಷರತ್ತುಗಳ ನಡುವೆ ಯೋಜನೆ ಯಶಸ್ವಿ ಯಾಗಬಹುದೆ? ಎಂದು ಕಾದು ನೋಡಬೇಕಾಗಿದೆ.
Related Articles
ಕುಕ್ಕುಟ ಮಹಾಮಂಡಳದ ಯೋಜನೆ ಈಗಷ್ಟೇ ಬಂದಿದೆ. ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಿಸಬಹುದು ಎಂದು ಚಿಂತನೆ ನಡೆಸಲಾಗುತ್ತಿದೆ. ನಗರ ಸಮೀಪದ ಒಂದೇ ಗ್ರಾಮದಲ್ಲಿ 22 ಬಿಪಿಎಲ್ ಕಾರ್ಡುದಾರ ಫಲಾನುಭವಿಗಳು ಸಿಗಬೇಕು. ಇದಕ್ಕೆ ಬ್ಯಾಂಕ್‌ನವರು ಸಾಲ ನೀಡಲು ಮುಂದಾಗಬೇಕು. ಫಲಾನುಭವಿಗಳಿಗೆ ಇದು ಲಾಭ ದಾ ಯ ಕ ಆಗಬೇಕಾಗಿದೆ. ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದೇವೆ. ಇದು ಪ್ರಾಥಮಿಕ ಹಂತದಲ್ಲಿದೆ.
– ಡಾ|ಹರೀಶ್ ತಮನ್ಕರ್, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ ಜಿಲ್ಲೆ
Advertisement