ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಐತಾಂಡಹಳ್ಳಿ ಗ್ರಾಮಸ್ಥರು ಹಾಗೂ ರೈತರು ಆರೋಪಿಸಿದ್ದಾರೆ.
Advertisement
ತಾಲೂಕಿನ ಮಾವಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐತಾಂಡಹಳ್ಳಿ ಗ್ರಾಮದ ಸರ್ವೆ ನಂ.172ರಲ್ಲಿ ಅಶೋಕ್ ಎಂಬುವರು ಹವಾನಿಯಂತ್ರಿತ ಕೋಳಿ ಫಾರಂ ನಿರ್ಮಿಸಿದ್ದಾರೆ.. ಇದಕ್ಕಾಗಿ ಪಕ್ಕದಲ್ಲಿನ ಐತಾಂಡಹಳ್ಳಿ ದೊಡ್ಡಕೆರೆ ಸರ್ವೆ ನಂ.169ರಲ್ಲಿನ ಜಾಗ ಒತ್ತುವರಿ ಮಾಡಿದ್ದಾರೆ.. ಫಾರಂನಿಂದ ಹೊರಬರುವ ಮಲಿನ ನೀರು, ತ್ಯಾಜ್ಯ ಅಕ್ಕಪಕ್ಕದ ಜಮೀನಿಗೆ ಹರಿದು ಬಿಟ್ಟಿದ್ದಾರೆ.. ಇದರಿಂದಾಗಿ ನೊಣಗಳ ಉತ್ಪತ್ತಿ ಹೆಚ್ಚಾಗಿಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
Related Articles
-ಐತಾಂಡಹಳ್ಳಿ ಮಂಜುನಾಥ್, ಜಿಲ್ಲಾಧ್ಯಕ್ಷ, ರೈತ ಸಂಘ
Advertisement
ರೈತ ಸಂಘದ ಮುಖಂಡರು ಇದೇ ಗ್ರಾಪಂ ವ್ಯಾಪ್ತಿಗೆ ಬರುವ ಐತಾಂಡಹಳ್ಳಿ ಗ್ರಾಮದ ಬಳಿ ಇರುವಕೋಳಿಫಾರಂನಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಳಿ ಫಾರಂನಲ್ಲಿ ಸ್ವಚ್ಛತೆ ಕಾಪಾಡುವಂತೆ ಮಾಲಿಕರಿಗೆ ನೋಟೀಸ್ ಜಾರಿಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತಕ್ರಮಕೈಗೊಳ್ಳಲಾಗುವುದು.
-ಕೆ.ಆರ್.ಸುರೇಶಬಾಬು, ಪಿಡಿಒ,
ಮಾವಹಳ್ಳಿ ಗ್ರಾಪಂ