Advertisement

ತಾರಾಪುಂಜದಲ್ಲೊಂದು ವಿರೂಪಿ ಗ್ರಹ ಪತ್ತೆ

11:47 PM Jan 13, 2022 | Team Udayavani |

ಲಂಡನ್‌: ಗುರುಗ್ರಹಕ್ಕಿಂತ ದುಪ್ಪಟ್ಟು ಗಾತ್ರ ಹೊಂದಿರುವ, ವಿಚಿತ್ರ ಆಕಾರದ ಗ್ರಹವೊಂದನ್ನು ಇದೇ ಮೊದಲ ಬಾರಿಗೆ  ನಮ್ಮದೇ ತಾರಾಪುಂಜದಲ್ಲಿ ಪತ್ತೆ ಹಚ್ಚಲಾಗಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಚಿಯೋಪ್ಸ್‌ ಉಪಗ್ರಹವು ಈ ಎಕ್ಸೋಪ್ಲಾನೆಟ್‌ ಅನ್ನು ಪತ್ತೆಹಚ್ಚಿದೆ.

Advertisement

ಸೂರ್ಯನನ್ನು ಹೊರತುಪಡಿಸಿ ನಕ್ಷತ್ರವನ್ನು ಸುತ್ತುವ ಇಂತಹ ಗ್ರಹಗಳ ಆಂತರಿಕ ರಚನೆಯನ್ನು ಅಧ್ಯಯನ ಮಾಡಲು ಇದರಿಂದ ನೆರವಾಗಲಿದೆ ಎಂದು ಖಗೋಳವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಗ್ರಹವನ್ನು ವಾಸ್ಪ್-103ಬಿ ಎಂದು ಹೆಸರಿಸಲಾಗಿದ್ದು, ಹರ್ಕ್ಯುಲಸ್‌ ನಕ್ಷತ್ರಪುಂಜದಲ್ಲಿ ಇದು ಕಂಡುಬಂದಿದೆ. ಸೂರ್ಯನಿಗಿಂತ ಸುಮಾರು 200 ಡಿಗ್ರಿಯಷ್ಟು ಶಾಖ ಮತ್ತು 1.7 ಪಟ್ಟು ದೊಡ್ಡದಾದ ವಾಸ್ಪ್ -103 ಎಂಬ ನಕ್ಷತ್ರದ ಕಕ್ಷೆಯಲ್ಲಿ ಈ ಎಕ್ಸೋಪ್ಲಾನೆಟ್‌ ಸುತ್ತುತ್ತಿದೆ.

ಗ್ರಹದ ಆಕಾರ ವಿಚಿತ್ರವೇಕೆ? :

ಈಗ ಪತ್ತೆಯಾಗಿರುವ ಗ್ರಹದ ಆಕಾರವು ವಿಚಿತ್ರ ಅಥವಾ ಸೊಟ್ಟಗಾಗಿರಲು ಬೃಹತ್‌ ಪ್ರಮಾಣದ ತರಂಗಗಳ ಶಕ್ತಿಯೇ ಕಾರಣ. ಭೂಮಿಯಲ್ಲೂ ಇದೇ ರೀತಿಯ ಅಲೆಗಳನ್ನು ನಾವು ಸಮುದ್ರದಲ್ಲಿ ಕಾಣಬಹುದು. ಆದರೆ, ಭೂಮಿ ಮತ್ತು ಚಂದ್ರನ ನಡುವಿನ ದೂರ ಬಹಳಷ್ಟಿರುವ ಕಾರಣ ಭೂಮಿಯ ಆಕಾರವು ವಿರೂಪಗೊಂಡಿಲ್ಲ. ಆದರೆ, ಈ ಹೊಸ ಗ್ರಹದ ಗಾತ್ರವು ಗುರುಗ್ರಹಕ್ಕಿಂತ ದುಪ್ಪಟ್ಟಿದೆ. ಮಾತ್ರವಲ್ಲ, ಈ ಗ್ರಹವು ಕೇವಲ ಒಂದೇ ದಿನದಲ್ಲಿ ನಕ್ಷತ್ರದ ಸುತ್ತ ಸುತ್ತುತ್ತದೆ. ಗ್ರಹವು ನಕ್ಷತ್ರಕ್ಕೆ ಅಷ್ಟೊಂದು ಸಮೀಪದಲ್ಲಿರುವ ಕಾರಣ ಭಾರೀ ಪ್ರಮಾಣದ ಅಲೆಗಳು ಸೃಷ್ಟಿಯಾಗಿ, ಗ್ರಹದ ಆಕಾರವು ವಿರೂಪಗೊಂಡಿರಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು.

Advertisement

Udayavani is now on Telegram. Click here to join our channel and stay updated with the latest news.

Next