Advertisement
ಕರ್ನಾಟಕ ಮುನ್ಸಿಪಲ್ ಆಕ್ಟ್ 1976 ಅಡಿಯಲ್ಲಿ ರಾಜ್ಯದ ಎಲ್ಲ ನಗರ ಪಾಲಿಕೆಗಳ ಕಾಯ್ದೆಯ ಅಡಿಯಲ್ಲಿಯೇ ಬಿಬಿಎಂಪಿ ಕಾಯ್ದೆಯೂ ಬರುತ್ತದೆ. ಆದರೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಮಾನ್ಯತೆಯನ್ನು ಪಡೆದುಕೊಂಡಿದ್ದು ಈ ನಗರಕ್ಕೆ ಪ್ರತ್ಯೇಕ ಕಾನೂನು ಜಾರಿಗೊಳಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಅದೇ ಕಾರಣಕ್ಕೆ ರಾಜ್ಯ ಸರ್ಕಾರ ಬೆಂಗಳೂರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಲು ವಿಧೇಯಕ ಮಂಡಿಸಿದೆ. ಹೊಸ ವಿಧೇಯಕದಲ್ಲಿ ಸುಮಾರು, 29 ಅಂಶಗಳನ್ನು ಸೇರಿಸಲಾಗಿದ್ದು, ಮುಂಬೈ ಮಾದರಿಯಲ್ಲಿ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಬರಲಾಗುತ್ತಿದೆ. ಅಲ್ಲದೇ ಮೇಯರ್ ಅವಧಿ ಐದು ವರ್ಷಕ್ಕೆ ವಿಸ್ತರಿಸುವುದು, ವಾರ್ಡ್ ಕಮಿಟಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ನಗರ ವ್ಯಾಪ್ತಿಗೊಳಪಟ್ಟ ಬೆಂಗಳೂರಿನ ಹೊರ ವಲಯವನ್ನು ಮಹಾನಗರ ವ್ಯಾಪ್ತಿಗೆ ಒಳಪಡಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಮುಂದೂಡಿಕೆ ತಂತ್ರ?: ಮುಂಬರುವ ಸಪ್ಟೆಂಬರ್ ನಲ್ಲಿ ಬಿಬಿಎಂಪಿ ಅವಧಿ ಮುಕ್ತಾಯವಾಗಲಿದ್ದು ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಬೇಕಿದೆ. ಆದರೆ, ರಾಜ್ಯ ಸರ್ಕಾರ ಈಗ ಬೆಂಗಳೂರಿಗೆ ಸಂಬಂಧಿಸಿದಂತೆ ಹೊಸ ಕಾಯ್ದೆ ರಚಿಸಲು ವಿಧೇಯಕ ಮಂಡಿಸಿದ್ದು ಆ ವಿಧೇಯಕವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿರುವುದರಿಂದ ಆ ಸಮಿತಿ ಈ ಕುರಿತು ಸಂಬಂಧ ಪಟ್ಟ ಸಂಘ ಸಂಸ್ಥೆಗಳು,ಸಾರ್ವಜನಿಕರ ಅಭಿಪ್ರಾಯ ಪಡೆದು ವಿಧಾನಸಭೆಗೆ ವರದಿ ಕೊಡಬೇಕು. ಆ ವರದಿ ಸಲ್ಲಿಸಲು ಕನಿಷ್ಠ ಒಂದು ವರ್ ಷ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಅಲ್ಲದೇ ವಿಧಾನಸಭೆಯಲ್ಲಿ ಸದನ ಸಮಿತಿ ರಚನೆಯಾಗುವುದರಿಂದ ಈ ವಿಷಯದಲ್ಲಿ ಕೋರ್ಟ್ ಕೂಡ ಮಧ್ಯಸ್ಥಿಕೆಯ ವಹಿಸಲು ಅವಕಾಶ ಇರುವುದಿಲ್ಲ ಎನ್ನುವ ಕಾರಣಕ್ಕಾಗಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸದನ ಸಮಿತಿ ರಚನೆಗೆ ಸಹಮತ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರತ್ಯೇಕ ಕಾಯ್ದೆಗೆ ಕಾಂಗ್ರೆಸ್ ಸಹಮತ?: ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ವಿಷಯದಲ್ಲಿ ಕಾಂಗ್ರೆಸ್ ಸದಸ್ಯರೂ ಕೂಡ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿದ್ದಾರೆ ಎಂದು ತಿಳಿದು ಬಂದಿದೆ ಆದರೆ, ಬಿಬಿಎಂಪಿಗೆ ಅಧಿಕಾರ ಹಂಚಿಕೆಯಲ್ಲಿ ಶಾಸಕರ ಅಧಿಕಾರದ.ಬಗ್ಗೆ ಸ್ಪಷ್ಟತೆ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಷಿ ಬಿ.ಎಸ್. ಪಾಟೀಲ್ ವರದಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲು ಆಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿಗೆ ಹೊಸ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಿಧೆಯಕ ಮಂಡಿಸಲಾಗಿದ್ದು, ಅದು ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ. ಸಮಿತಿ ವರದಿ ಬರುವವರೆಗೂ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ವರದಿ ಬಂದ ಕೂಡಲೆ ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ.– ಆರ್. ಅಶೋಕ್, ಕಂದಾಯ ಸಚಿವ
ರಾಜ್ಯ ಸರ್ಕಾರ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತರಲು ಮುಂದಾಗಿದೆ. ಅದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿದ್ದಾರೆ. ಸಮತಿ ಆದಷ್ಟು ಬೇಗ ವರದಿ ನೀಡಿ, ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯುವಂತಾಗಬೇಕು. –ರಾಮಲಿಂಗಾ ರೆಡ್ಡಿ, ಮಾಜಿ ಗೃಹ ಸಚಿವ
– ಶಂಕರ ಪಾಗೋಜಿ