Advertisement

Vote: ಇನ್ನು ನಿಗದಿತ ಕೇಂದ್ರಗಳಲ್ಲಿಯೇ ಅಂಚೆ ಮತ ಚಲಾವಣೆ

09:34 PM Sep 12, 2023 | Team Udayavani |

ನವದೆಹಲಿ: ಸಂಭಾವ್ಯ ದುರುಪಯೋಗವನ್ನು ತಪ್ಪಿಸುವ ಉದ್ದೇಶದಿಂದ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ನಿಗದಿತ ಕೇಂದ್ರಗಳಲ್ಲಿಯೇ ಮತ ಚಲಾಯಿಸುವ ನಿಯಮವನ್ನು ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿದೆ.

Advertisement

ಈ ನಿಟ್ಟಿನಲ್ಲಿ 1961ರ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವರಿಗೆ ಶಿಫಾರಸು ಮಾಡಿತ್ತು. ಈ ಮೂಲಕ ಚುನಾವಣಾ ಕರ್ತವ್ಯದಲ್ಲಿರುವವರು ತಾವು ನಿಯೋಜನೆಗೊಂಡಿರುವ ಸ್ಥಳದಲ್ಲಿರುವ ನಿಗದಿತ ಕೇಂದ್ರಗಳಲ್ಲಿಯೇ ತಮ್ಮ ಮತವನ್ನು ಚಲಾಯಿಸಬೇಕಿದೆ.

ಹೆಚ್ಚು ಸಮಯ ಅಂಚೆ ಮತಪತ್ರವನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳಿಂದ ಲಂಚ, ಬೆದರಿಕೆ ಸೇರಿದಂತೆ ಅನೈತಿಕ ವಿಧಾನಗಳ ಮೂಲಕ ಅನಗತ್ಯ ಪ್ರಭಾವಕ್ಕೆ ಒಳಗಾಗುವ ಸಂಭವ ಇರಲಿದೆ ಎಂದು ಚುನಾವಣಾ ಆಯೋಗ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next