Advertisement

ಸೇವೆ ಸ್ಥಗಿತಗೊಳಿಸಿ ಅಂಚೆ ನೌಕರರ ಪ್ರತಿಭಟನೆ

02:22 PM Mar 29, 2022 | Team Udayavani |

ಬೈಲಹೊಂಗಲ: ಕೇಂದ್ರ ಸರ್ಕಾರ ಅಂಚೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ನೀತಿ ಖಂಡಿಸಿ ಮತ್ತು ತಮ್ಮ ಬೇಡಿಕೆಗೆ ಆಗ್ರಹಿಸಿ ಮಾ.28, 29ರಂದು ಬಂದ್‌ಗೆ ಕರೆ ನೀಡಿದ ಪ್ರಯುಕ್ತ ಬೆಂಬಲ ನೀಡಿ ಪಟ್ಟಣದ ಪ್ರಧಾನ ಅಂಚೆ ಕಚೇರಿ ನೌಕರರ ವರ್ಗ ಕಚೇರಿ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದರು.

Advertisement

ಜನವರಿ 2020ರಿಂದ 2021ರವರೆಗೆ ತಡೆ ಹಿಡಿಯಲಾಗಿರುವ ಡಿಎ, ಡಿಆರ್‌ ಬಾಕಿ ಶೀಘ್ರ ಪಾವತಿಸಬೇಕು. ಪೋಸ್ಟ್‌ಮ್ಯಾನ್‌, ಜೆಡಿಎಸ್‌, ಜಿಡಿಎಸ್‌ ಹುದ್ದೆ ಭರ್ತಿ ಮಾಡಬೇಕು. ಬಡ್ತಿಗಾಗಿ ಅತ್ಯುತ್ತಮ ಬೆಂಚ್‌ ಮಾರ್ಕ್‌ ಮಾನದಂಡ ತೆಗೆದು ಹಾಕಬೇಕು. ಅಂಚೆ ಇಲಾಖೆ ಖಾಸಗೀಕರಣದ ಧೋರಣೆ ಕೈಬಿಡಬೇಕು. ಇಲಾಖೆಯಲ್ಲಿ ಖಾಲಿ ಹುದ್ದೆ ಕೂಡಲೇ ಭರ್ತಿ ಮಾಡಬೇಕು. ಕೋವಿಡ್‌ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಪ್ರತಿ ನೌಕರರಿಗೆ ವಿಶೇಷ ರಜೆ ಸೇರಿದಂತೆ ಇತರೆ ಸೌಲಭ್ಯ ಒದಗಿಸಬೇಕು. ಕಮಲೇಶಚಂದ್ರ ವರದಿ ಗ್ರಾಮೀಣ ಪೋಸ್ಟ್‌ಮನ್‌ ಗಳಿಗೂ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.

ಪಟ್ಟಣದಲ್ಲಿರುವ ಪ್ರಧಾನ ಅಂಚೆ ಕಚೇರಿ, ಗ್ರಾಮೀಣ ಪರದೇಶದ ಅಂಚೆ ಕಚೇರಿಗಳಲ್ಲಿ ಆಗುತ್ತಿರುವ ನೆಟ್‌ ವರ್ಕ್‌ ಸಮಸ್ಯೆ ಪರಿಹರಿಸಬೇಕು. ಅವೈಜ್ಞಾನಿಕ ಮಿತಿ ನೀಡಿ ನೌಕರರ ಮೇಲೆ ಮಾನಸಿಕ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು. 8ನೇ ವೇತನ ಆಯೋಗ ರಚಿಸುವುದು ಸೇರಿ ವಾರಕ್ಕೆ 5 ದಿನ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಎನ್‌ಪಿಎಸ್‌ ಪದ್ಧತಿ ರದ್ದುಗೊಳಿಸಿ ನೌಕರರಿಗೆ ಹಳೇ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಬೇಕು. ಹೀಗೆ ಹಲವು ಸೌಲಭ್ಯ, ವಿರೋಧಿ ನೀತಿ ಖಂಡಿಸಿ ಪ್ರತಿಭಟಿಸಿದರು.

ಪ್ರಧಾನ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ಭಾರತಿ ಜೀರೆ, ಇಂದುಮತಿ ಖಂಡ್ರೆ, ಪೂರ್ಣಿಮಾ ನಾಡಗೌಡ್ರ, ಸವಿತಾ ಕಬ್ಬೂರ, ಜಗದೀಶ ತ್ಯಾವಟಗಿ, ಪಂಪಾವತಿ ಬೋವಿ, ಹಣಮಂತ ರಾಜಪ್ಪಗೋಳ, ಎಸ್‌.ಎಂ. ಯರಗಟ್ಟಿ, ರವಿಕುಮಾರ, ಬಸವರಾಜ ಪುಂಡಿ, ರಮೇಶ ಭೂತಾಳಿ, ಪ್ರಕಾಶ ಬಿಜ್ಜೂರ, ಜಿ.ಎ. ಹುದ್ದಾರ, ಶಿವಕುಮಾರ ಆಚಮಟ್ಟಿ, ಚನ್ನಬಸಪ್ಪ ಪಾಟೀಲ, ಅನಂತ ಯಲಿಗಾರ, ಅಮೃತಾ ಕರ್ಜಗಿಮಠ, ಅನಿತಾ ಸವಣೂರ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next