Advertisement
ಸಹೋದರ-ಸಹೋದರಿ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಆ.11 ರಂದು ಇಡೀ ದೇಶಾದ್ಯಂತ ಆಚರಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಈಗಾಗಲೇ ಆರಂಭವಾಗಿರುವ ರಾಖೀ ಪೋಸ್ಟ್ ಆ.6ರವರೆಗೆ ಆನ್ ಲೈನ್ ಮೂಲಕ ರಾಖೀ ಮತ್ತು ಉಡುಗೊರೆ ಕಾರ್ಡ್ (ಗ್ರೀಟಿಂಗ್ ಕಾರ್ಡ್) ಅನ್ನು ಸಹೋದರರಿಗೆ ಕಳುಹಿಸಬಹುದಾಗಿದೆ. ಇದಕ್ಕಾಗಿ ಕರ್ನಾಟಕ ಅಂಚೆ
Related Articles
Advertisement
ಗೂಗಲ್‌ನಲ್ಲಿ www.karnatakapost.gov.in ಎಂಬ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ, ಸಾರ್ವಜನಿಕ ಸೇವೆಗಳ ಎಂಬ ವಿಭಾಗದಲ್ಲಿ ರಕ್ಷಾ ಬಂಧನ/ರಾಖೀ ಪೋಸ್ಟ್ ಎಂದಿರುತ್ತದೆ. ಅದರ ಮೇಲೆ ಟ್ಯಾಪ್ ಮಾಡದರೆ, ರಾಖಿ ಪೋಸ್ಟ್ ಪೇಜ್ ತೆರೆಯುತ್ತದೆ. ಅಲ್ಲಿ ಕಳುಹಿಸುವ ಸಹೋದರಿ ಮತ್ತು ಸ್ವೀಕರಿಸುವ ಸಹೋದರನ ಸಂಪೂರ್ಣ ಅಂಚೆ ವಿವರವನ್ನು ನೀಡಿ, ಅಲ್ಲಿರುವ ಹತ್ತಾರು ರಾಖೀಗಳಲ್ಲಿ ನಿಮಗಿಷ್ಟವಾದ ಡಿಸೈನ್ ರಾಖಿಯನ್ನು ಮತ್ತು ಚಂದದ ಸಂದೇಶವುಳ್ಳ ಗ್ರೀಟಿಂಗ್ ಕಾರ್ಡ್‌ಗಳನ್ನು ಆಯ್ಕೆ ಮಾಡಿದ ನಂತರ ನೆಟ್ ಬ್ಯಾಂಕಿಂಗ್, ಗೂಗಲ್‌ಪೇ, ಭೀಮ್ ಆ್ಯಪ್, ಫೋನ್ ಪೇ ಇತರೆ ನೆಟ್ ಪೇಮೆಂಟ್ ವಿಧಾನದಲ್ಲಿ ಶುಲ್ಕ 120 ರೂ. ಪಾವತಿಸಿ, ಆ.6ರೊಳಗೆ ಕಳುಹಿಸಿದಾಗ ಮಾತ್ರ ರಾಖಿ ಹಬ್ಬಕ್ಕೆ ಸರಿಯಾಗಿ ತಮ್ಮ ರಾಖೀ ಮತ್ತು ಸಂದೇಶ ಸಹೋದರನಿಗೆ ತಲುಪುತ್ತದೆ. ಇದರಲ್ಲಿ ಯೋಧರಿಗಾಗಿಯೇ ಪ್ರತ್ಯೇಕವಾದ ವಿಶೇಷ ರಾಖಿಗಳು ಮತ್ತು ಬರಹಗಳ ಗ್ರೀಟಿಂಗ್ ಕಾರ್ಡ್‌ಗಳನ್ನು ಕಳುಹಿಸಬಹುದಾಗಿದೆ.