Advertisement
ದೇಶದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯ ಉದ್ದೇಶದಿಂದ “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್'(ಐಪಿಪಿಬಿ) ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಇದೀಗ ಇದೇ ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಗೂ ಕೂಡ ಆರ್ಥಿಕ ಸೇವೆಯ ಸೌಲಭ್ಯಗಳು ದೊರೆಯಬೇಕೆಂಬ ಉದ್ದೇಶದಿಂದ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದ್ದು ಇದರ ಖಾತೆಗಳನ್ನು ನಿರ್ವಹಿಸಬಹುದಾಗಿದೆ.
ಮೊಬೈಲ್ ಅಪ್ಲಿಕೇಶನ್ ಮೂಲಕ ಖಾತೆಯ ಉಳಿತಾಯ ಮೊತ್ತ ಸೇರಿದಂತೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವ ಅವಕಾಶವಿದೆ. ಯಾವುದೇ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬಹುದಾಗಿದೆ. ಜತೆಗೆ ವಿವಿಧ ಬಿಲ್‌ಗಳನ್ನೂ ಪಾವತಿಸಬಹುದಾಗಿದೆ. ಚೆಕ್‌ಬುಕ್‌ಗೆ ಅರ್ಜಿ
ಇದರಲ್ಲಿ ಚೆಕ್ ಪುಸ್ತಕಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಚೆಕ್ ಮೂಲಕ ಮಾಡುವ ಶುಲ್ಕ ಪಾವತಿ ಕ್ರಿಯೆಯನ್ನೂ ನಿಯಂತ್ರಿಸಬಹುದಾಗಿದೆ.
Related Articles
ಕೋರ್ ಬ್ಯಾಕಿಂಗ್ ವ್ಯವಸ್ಥೆ ಇರುವ ಪೋಸ್ಟಲ್ ಬ್ಯಾಂಕ್ ಶಾಖೆಯ ಖಾತೆದಾರರಿಗೆ ಮಾತ್ರ ಈ ಆ್ಯಪ್ ಪ್ರಯೋಜನಕಾರಿ. ಮೊಬೈಲ್ ಆ್ಯಪ್‌ಗೆ ಸಂಬಂಧಪಟ್ಟ ಕೆವೈಸಿಯನ್ನು ಕೂಡ ಮುಂಚಿತವಾಗಿ ಪೂರ್ಣಗೊಳಿಸಬೇಕಿದೆ. ಆ್ಯಪ್ ಬಳಕೆಗೂ ಪೋಸ್ಟಲ್ ಬ್ಯಾಂಕ್‌ನಿಂದ ಅನುಮತಿ ಸಿಗಬೇಕಿದೆ. ಐಪಿಪಿಬಿ ಮೊಬೈಲ್ ಆ್ಯಪ್ ಆ್ಯಂಡ್ರಾಯ್ಡ್, ಐಒಎಸ್ ಆವೃತ್ತಿಗಳಲ್ಲಿ ಲಭ್ಯ.
Advertisement
ನಿರ್ವಹಣೆ ಹೇಗೆ?ಖಾತೆ ಹೊಂದಿರುವ ಗ್ರಾಹಕರು ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಗಳ ಕುರಿತ ಅರ್ಜಿ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಖಾತೆಗೆ ಲಾಗ್ ಇನ್ ಆಗಬೇಕು. ಲಾಗಿನ್ ವಿವರಗಳು ಮತ್ತು “ಒಟಿಪಿ’ಯನ್ನು ನಮೂದು ಮಾಡಿ ಅಪ್ಲಿಕೇಶನ್ ಅನ್ನು ಬಳಸಬಹುದು. ಖಾತೆ ದೃಢೀಕರಣದ ಅನಂತರ ಖಾತೆದಾರ ನಾಲ್ಕು ಅಂಕಿಯ ಎಂಪಿಐಎನ್ ಬಳಸಿ ಖಾತೆಯನ್ನು ನಿರ್ವಹಿಸಬಹುದಾಗಿದೆ. 9 ಖಾತೆಗಳ ನಿರ್ವಹಣೆ
ಅಂಚೆ ಇಲಾಖೆ ಅಡಿಯಲ್ಲಿ 9 ಸಣ್ಣ ಉಳಿತಾಯ ಹೂಡಿಕೆ ಯೋಜನೆಗಳು ಲಭ್ಯವಿವೆ.ಅಂಚೆ ಕಚೇರಿ ಸಮಯ ಠೇವಣಿ ಖಾತೆ (ಟಿಡಿ), ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (ಎಂಐಎಸ್), ಅಂಚೆ ಕಚೇರಿಯ ಉಳಿತಾಯ ಖಾತೆ ಮತ್ತು 5 ವರ್ಷದ ಪೋಸ್ಟ್ ಆಫೀಸ್ ಠೇವಣಿ ಖಾತೆಗಳನ್ನು (ಆರ್‌ಡಿ) ಈ ಆ್ಯಪ್ ಮೂಲಕ ನಿರ್ವಹಿಸುವ ಅವಕಾಶ ನೀಡಲಾಗಿದೆ.