Advertisement

ಅಂಚೆ ಇಲಾಖೆಯ ಸಣ್ಣ ಹೂಡಿಕೆಗಳ ಯೋಜನೆ:

04:40 PM Oct 04, 2021 | Team Udayavani |

ಹೊಸ ದೆಹಲಿ:- ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳು 2021-22 ಇವುಗಳ ಮೂರನೇ ತ್ರೈಮಾಸಿಕ ಬಡ್ಡಿದರಗಳನ್ನು ಯಥಾ ಪ್ರಕಾರ ಮುಂದುವರಿಸಲು ನಿರ್ಧರಿಸಿದೆ.

Advertisement

ಹಿರಿಯ ನಾಗರಿಕರ ಪಂಚವಾರ್ಷಿಕ ಯೋಜನೆಗಳ ಬಡ್ಡಿ ದರವು ಶೇ. 7.4 ದಲ್ಲೇ ಉಳಿಸಲಾಗಿದೆ. ಇವು ತ್ರೈಮಾಸಿಕವಾಗಿ ಪಾವತಿಸಲಾಗುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಾಗಿದೆ.

ಇದನ್ನೂ ಓದಿ;- ಶ್ರೀರಂಗಪಟ್ಟಣ : ಸಚಿವ ಅಶೋಕ್ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ

ಈ ಹಿಂದೆ ಇದ್ದಂತೆ ರಾಷ್ಟೀಯ ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ. 4 ದಂತೆ ಮುಂದುವರಿಸಲಾಗಿದೆ.  ಧೀರ್ಘಾವಧಿ ಹೂಡಿಕೆಗಳು ಅಂದರೆ, 5 ಅಥವಾ ಹೆಚ್ಚು ವರ್ಷಗಳ ಠೇವಣಿಗೆ ಶೇ. 5.5 ರಿಂದ 6.7 ವರೆಗೆ ಬಡ್ಡಿ ನೀಡಲಾಗುವುದು. ಹಾಗೆಯೇ ಆರ್ ಡಿ ಠೇವಣಿಯ ಬಡ್ಡಿದರವನ್ನು ಶೇ. 5.8ಕ್ಕೇರಿಸಲಾಗಿದೆ.

ಹಲವು ರಾಷ್ಟ್ರೀಯ ಠೇವಣೆ ಯೋಜನೆಗಳಿಗೆ ಅನ್ವಯವಾಗುವ ಬಡ್ಡಿದರಗಳ ಮಾಹಿತಿ ಈ ಕೆಳಗಿನಂತಿವೆ:-

ಕ್ರ.ಸಂ ಯೋಜನೆಗಳು ಬಡ್ಡಿದರಗಳು ಪಾವತಿಯ ಕಾಲಾವಧಿ
01. ಅಂಚೆ ಉಳಿತಾಯ ಖಾತೆ 4.0 ವಾರ್ಷಿಕ
02. ವಾರ್ಷಿಕ ಹೂಡಿಕೆ 5.5(ವಾರ್ಷಿಕ ಬಡ್ಡಿ- ರೂ. 561 on Rs. 10000 ಹೂಡಿಕೆ) ತ್ರೈಮಾಸಿಕ
03. ದ್ವಿ ವಾರ್ಷಿಕ 5.5(ವಾರ್ಷಿಕ ಬಡ್ಡಿ ರೂ. 561 on Rs. 10000 ಹೂಡಿಕೆ) ತ್ರೈಮಾಸಿಕ
04. ಮೂರು ವರ್ಷಗಳ ಯೋಜನೆ 5.5(ವಾರ್ಷಿಕ ಬಡ್ಡಿ ರೂ.. 561 on Rs. 10000 ಹೂಡಿಕೆ) ತ್ರೈಮಾಸಿಕ
05. 5 ವರ್ಷಗಳ ಯೋಜನೆ 6.7(ವಾರ್ಷಿಕ ಬಡ್ಡಿ ರೂ.. 687 on Rs. 10000 ಹೂಡಿಕೆ) ತ್ರೈಮಾಸಿಕ
06. 5 ಆರ್‌ಡಿ 5.8 ತ್ರೈಮಾಸಿಕ
07. ಹಿರಿಯ ನಾಗರಿಕರ ಯೋಜನೆ 7.4(ತ್ರೈಮಾಸಿಕ ಬಡ್ಡಿದರ Rs. 185 on Rs. 10000 ಹೂಡಿಕೆ) ತ್ರೈಮಾಸಿಕ ಮತ್ತು ಪಾವತಿಸಿದಂತೆ
08. ತಿಂಗಳ ಹೂಡಿಕೆ 6.6(ತಿಂಗಳ ಬಡ್ಡಿ. Rs. 55 on Rs. 10000 ಹೂಡಿಕೆ) ಮಾಸಿಕ ಮತ್ತು ಪಾವತಿಸಿದಂತೆ
09. ಎನ್‌ಎಸ್‌ಸಿ 6.8 ವಾರ್ಷಿಕ
10. ಪಿಪಿಎಪ್ 7.1 ವಾರ್ಷಿಕ
11. ಕಿಸಾನ್‌ ವಿಕಾಸ್‌ ಪತ್ರ 6.9 ವಾರ್ಷಿಕ
12. ಸುಕನ್ಯ ಸಮೃದ್ಧಿ ಯೋಜನೆ 7.6 ವಾರ್ಷಿಕ
Advertisement

ಜನವರಿ 2022 ರಿಂದ 1- ಅಕ್ಟೋಬರ್‌ -2022ರ ವರೆಗಿನ ಯೋಜನೆಗಳಿಗೆ ಈ ಬದಲಾವನೆಗಳು ಅನ್ವಯಿಸುತ್ತವೆ.‌ 1- ಅಕ್ಟೋಬರ್- 2021 ರಿಂದ 31‌ – ಡಿಸೆಂಬರ್ 2021 ವರೆಗಿನ ಅವಧಿಯಲ್ಲಿ ಆರಂಭವಾದ ಯೋಜನೆಗಳ ಬಡ್ಡಿದರಕ್ಕೆ ಈ ಬದಲಾವಣೆಗಳು ಅನ್ವಯಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next