Advertisement
* ಉಳಿತಾಯ ಖಾತೆಯ ಪ್ರಾರಂಭಿಕ ಠೇವಣಿ ರೂ. 50 ಹಾಗೂ ಆರ್.ಡಿ ಖಾತೆಯ ಪ್ರಾರಂಭಿಕ ಠೇವಣಿ 10 ರೂ. ಮಾತ್ರ. ಇದರಿಂದಾಗಿ ಸಣ್ಣ ಆದಾಯದವರು ಕೂಡಾ ಉಳಿತಾಯ ಮಾಡಬಹುದು. “ಸಣ್ಣ ಉಳಿತಾಯ’ ನಿಜವಾಗಿ ಪ್ರಾರಂಭವಾದದ್ದು ಅಂಚೆ ಕಚೇರಿಗಳಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.
Related Articles
Advertisement
* ಇಲ್ಲಿ ತೊಡಗಿಸಿದ ಹಣಕ್ಕೆ ಭಾರತ ಸರ್ಕಾರದ ಶೇ. 100 ಭದ್ರತೆ ಇರುತ್ತದೆ. ಆ ವಿಚಾರದಲ್ಲಿ ಬೇರೊಂದು ಮಾತಿಲ್ಲ.
* ಎಲ್ಲಾ ಠೇವಣಿಗಳಿಗೂ ನಾಮ ನಿರ್ದೇಶನ ಸವಲತ್ತು ಇರುತ್ತದೆ.
* ಠೇವಣಿ ಮೇಲಿನ ಬಡ್ಡಿ ದರ ಆಯಾಯ ಸಮಯದಲ್ಲಿ ನಿರ್ಧರಿಸಿದಂತಿರುತ್ತದೆ.
* ಎನ್.ಎಸ್.ಸಿ, ಅವಧಿ ಠೇವಣಿ, ಕಿಸಾನ್ ಪತ್ರದ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು.
* ಅತೀ ಕಡಿಮೆ ಮೊತ್ತದಿಂದ ಬ್ಯಾಂಕಿನಲ್ಲಿ ಠೇವಣಿ ವಿಚಾರದಲ್ಲಿ ಪಡೆಯುವ ಎಲ್ಲಾ ವ್ಯವಹಾರ ಅಂಚೆ ಕಚೇರಿಯಲ್ಲಿ ಲಭ್ಯ.