Advertisement

ಅಂಚೆ ಬ್ಯಾಂಕ್‌ ಇನ್ನು ಡಿಜಿಟಲ್‌ 

09:30 AM Apr 09, 2018 | Karthik A |

ಹೊಸದಿಲ್ಲಿ: ದೇಶದಲ್ಲಿರುವ ಸುಮಾರು 34 ಕೋಟಿ ಅಂಚೆ ಕಚೇರಿ ಉಳಿತಾಯ ಖಾತೆದಾರರಿಗೆ ಸಿಹಿಸುದ್ದಿ. ಅಂಚೆ ಕಚೇರಿ ಖಾತೆದಾರರಿಗೆ ಮೇ ತಿಂಗಳಿಂದಲೇ ಪೂರ್ಣ ಪ್ರಮಾಣದ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ಲಭ್ಯವಾಗಲಿದೆ. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ನೊಂದಿಗೆ (ಐಪಿಪಿಬಿ) ಅಂಚೆ ಕಚೇರಿ ಉಳಿತಾಯ ಖಾತೆಗಳನ್ನು ಲಿಂಕ್‌ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 

Advertisement

ಹೀಗಾಗಿ, ಮುಂದಿನ ತಿಂಗಳಿಂದಲೇ ಖಾತೆದಾರರು ತಮ್ಮ ಖಾತೆಯಲ್ಲಿನ ಹಣವನ್ನು ಆನ್‌ಲೈನ್‌ ಮೂಲಕ ಇತರ ಬ್ಯಾಂಕುಗಳಿಗೆ ವರ್ಗಾಯಿಸಲು ಸಾಧ್ಯವಾಗಲಿದೆ. ಬ್ಯಾಂಕ್‌ ಗ್ರಾಹಕರಿಗೆ ಇರುವಂತೆಯೇ ಅಂಚೆ ಖಾತೆದಾರರೂ ನೆಫ್ಟ್, ಆರ್‌.ಟಿ.ಜಿ.ಎಸ್‌. ಹಾಗೂ ಇತರೆ ಹಣ ವರ್ಗಾವಣೆ ಸೇವೆಗಳನ್ನು ಬಳಸಬಹುದು. ಅಲ್ಲದೆ, 1.55 ಲಕ್ಷ ಶಾಖೆಗಳಿರುವ ಭಾರತೀಯ ಅಂಚೆ ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಜಾಲವಾಗಿಯೂ ಹೊರಹೊಮ್ಮಲಿದೆ.

Advertisement

Udayavani is now on Telegram. Click here to join our channel and stay updated with the latest news.

Next