Advertisement

ಅತಿಥಿ ಉಪನ್ಯಾಸಕರ ಹುದ್ದೆ ಕಾಯಂ ಇಲ್ಲ: ಡಾ| ಎಂ.ಸಿ. ಸುಧಾಕರ್‌

11:38 PM Feb 13, 2024 | Pranav MS |

ಬೆಂಗಳೂರು: ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಹುದ್ದೆ ಕಾಯಂಗೊಳಿಸಲು ಸಾಧ್ಯವಿಲ್ಲ. ನಿಯಮದಲ್ಲೂ ಅವಕಾಶ ಇಲ್ಲ ಎಂದು ಪುನರುಚ್ಚರಿಸಿದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌, ಕಾಯಂ ಬದಲಿಗೆ ನೇಮಕಾತಿ ವೇಳೆ ಶೇ. 5ರಷ್ಟು ಕೃಪಾಂಕ ಸೇರಿ ಮತ್ತಿತರ ಸೌಲಭ್ಯಗಳನ್ನು ನೀಡಲು ಸರಕಾರ ಉದ್ದೇಶಿಸಿದೆ ಎಂದು ಹೇಳಿದರು.

Advertisement

ವಿಧಾನಪರಿಷತ್‌ನಲ್ಲಿ ನಿಯಮ 72ರ ಅಡಿ ವಿಷಯ ಪ್ರಸ್ತಾವಿಸಿದ ಸದಸ್ಯರಾದ ಅ. ದೇವೇಗೌಡ, ಮರಿತಿಬ್ಬೇಗೌಡ, ಎಸ್‌.ವಿ. ಸಂಕನೂರ, ಚಿದಾನಂದಗೌಡ ಅವರು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ನಾನು ಪಶ್ಚಿಮ ಬಂಗಾಲ, ಹರಿಯಾಣ, ಪಂಜಾಬ್‌ ಎಲ್ಲ ರಾಜ್ಯದಲ್ಲಿ ಅನುಸರಿಸುತ್ತಿರುವ ಮಾರ್ಗಗಳನ್ನು ನೋಡಿದ್ದೇನೆ. ಎಲ್ಲಿಯೂ ಕಾಯಂ ಮಾಡಿಲ್ಲ. ನಿಯಮದಲ್ಲೂ ಇದಕ್ಕೆ ಅವಕಾಶ ಇಲ್ಲ. ಹೀಗಾಗಿ ಇಲ್ಲಿ ಸಹ ಕಾಯಂ ಮಾಡಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಸಿಎಂ ಸಿದ್ದರಾಮಣ್ಯ ಅವರು ಸಹ ಭರವಸೆ ನೀಡಿದಂತೆ ಈ ಹಿಂದೆ ಗ್ರಾಮೀಣ ಕೃಪಾಂಕ ನೀಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ನೇಮಕಾತಿ ಸಂದರ್ಭದಲ್ಲಿ ಗರಿಷ್ಠ ಶೇ. 5ರಷ್ಟು ಕೃಪಾಂಕ ನೀಡುವುದು, ಆ ಮೂಲಕ ನೇಮಕಾತಿ ವೇಳೆ ಆದ್ಯತೆ ಕಲ್ಪಿಸಲಾಗುವುದು’ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next