Advertisement

ಓಬವ್ವ,ಚನ್ನಮ್ಮ ವಿರುದ್ಧ ಸಿಂಹ ಅಭಿಮಾನಿಗಳ ಕೀಳು ಪೋಸ್ಟ್‌!

10:27 AM Nov 29, 2017 | |

ಬೆಂಗಳೂರು: ದೇಶಾದ್ಯಂತ ಪದ್ಮಾವತಿ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ ಚಿತ್ರವನ್ನು ಖಂಡಿಸುವ ಭರದಲ್ಲಿ  ‘ಪ್ರತಾಪ್‌ ಸಿಂಹ ಫೊರ್‌ ಸಿಎಂ’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಇತಿಹಾಸದ ವೀರ ವನಿತೆಯರಿಬ್ಬರ ಕುರಿತು  ಅತ್ಯಂತ ಕೀಳು ಪೋಸ್ಟ್‌ ಹಾಕಿ ಅಪಮಾನ ಮಾಡಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಪೋಸ್ಟ್‌ನಲ್ಲಿ ರಾಣಿ ಚೆನ್ನಮ್ಮ ಮತ್ತು ಓಬವ್ವ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ಬರೆದು, ‘ಕೋಪ ಬಂತಲ್ವಾ, ಹಾಗಾದ್ರೆ ಕನ್ನಡ ಚಿತ್ರರಂಗಕ್ಕೆ ಇಂಥ ಕಥೆಗಳ ವಿರುದ್ಧ ಕೋಪ ಬರ್ತಿಲ್ವಾ ?’ ಎಂದು ಪ್ರಶ್ನಿಸಲಾಗಿದೆ.

ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪೋಸ್ಟ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಪೋಸ್ಟ್‌ ಹಾಕಿದವರನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next