Advertisement

ಮಹಿಳಾ ಬಾಂಬರ್‌ಗಳಿಂದ ಚೈತ್ಯಾಲಯಗಳ ಮೇಲೆ ದಾಳಿ ಸಂಭವ : ಲಂಕಾ ಗುಪ್ತಚರ ವರದಿ

08:39 AM Apr 30, 2019 | Sathish malya |

ಕೊಲಂಬೋ : ಶ್ವೇತ ವಸ್ತ್ರ ಧಾರಿ ಮಹಿಳಾ ಬಾಂಬರ್‌ಗಳು ಲಂಕೆಯ ಬೌದ್ಧ ಚೈತ್ಯಾಲಯಗಳ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಶ್ರೀಲಂಕಾ ಗುಪ್ತಚರ ದಳಕ್ಕೆ ಸಿಕ್ಕಿದೆ.

Advertisement

253 ಮಂದಿಯನ್ನು ಬಲಿ ಪಡೆದ ಈಸ್ಟರ್‌ ಭಾನುವಾರದ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ ಒಂಬತ್ತು ಮಂದಿ ಬಾಂಬರ್‌ ಗಳ ಪೈಕಿ ಓರ್ವ ಮಹಿಳೆಯೂ ಇದ್ದಳು ಎಂಬುದನ್ನು ಲಂಕಾ ಗುಪ್ತಚರ ದಳ ನೆನಪಿಸಿಕೊಟ್ಟಿದೆ.

ಈಸ್ಟರ್‌ ಭಾನುವಾರದ ಬಾಂಬ್‌ ದಾಳಿಯ ಶಂಕಿತರು ಅಡಗಿಕೊಂಡಿದ್ದ ಮನೆಯ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳಿಗೆ ಅಲ್ಲಿ ಬೌದ್ಧ ಮಹಿಳಾ ಅನುಯಾಯಿಗಳು ತೊಡುವ ರೀತಿಯ ಶ್ವೇತ ವಸ್ತ್ರ (ಸ್ಕರ್ಟ್‌ ಮತ್ತು ಬ್ಲೌಸ್‌) ಗಳ ಐದು ಸೆಟ್‌ ಉಡುಪು ದೊರಕಿದ್ದವು.

ಕಳೆದ ಮಾರ್ಚ್‌ 29ರದು ಮುಸ್ಲಿಂ ಮಹಿಳೆಯೊಬ್ಬಳು 29,000 ಶ್ರೀಲಂಕಾ ರೂಪಾಯಿ ಖರ್ಚು ಮಾಡಿ ಗಿರಿಉಲ್ಲಾ ದಲ್ಲಿನ ಬಟ್ಟೆ ಅಂಗಡಿಯೊಂದರಿಂದ 9 ಸೆಟ್‌ ಶ್ವೇತವಸ್ತ್ರ ಖರೀದಿಸಿದ್ದಳು. ಸಿಸಿಟಿವಿ ಚಿತ್ರಿಕೆಯಲ್ಲಿ ಆಕೆ ಚಹರೆ, ಖರೀದಿ ಚಟುವಟಿಕೆಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳ ಕೈವಶವಾಗದಿರುವ ಇನ್ನೂ ನಾಲ್ಕು ಶ್ವೇತ ವಸ್ತ್ರಗಳ ಸೆಟ್‌ ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಬಹುಷಃ ಇವುಗಳನ್ನೇ ಬಳಸಿಕೊಂಡು ಮಹಿಳಾ ಬಾಂಬರ್‌ಗಳು ಬೌದ್ಧ ಚೈತ್ಯಾಲಯಗಳ ಮೇಲೆ ಅನುಯಾಯಿಗಳ ರೂಪದಲ್ಲಿ ಬಂದು ಆತ್ಮಾಹುತಿ ದಾಳಿ ನಡೆಸಬಹುದೆಂಬ ಶಂಕೆಯನ್ನು ಲಂಕಾ ಗುಪ್ತಚರ ದಳ ವ್ಯಕ್ತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next