Advertisement

ಏಕಕಾಲಕ್ಕೆ ಚುನಾವಣೆ?

10:27 AM Dec 04, 2018 | Team Udayavani |

ಹೊಸದಿಲ್ಲಿ: ಲೋಕಸಭೆಯ ಚುನಾವಣೆ ಜತೆಗೇ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳೂ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಚುನಾವಣಾ ಆಯೋಗದ ಮೂಲಗಳು ಸೋಮವಾರ ಹೇಳಿವೆ. ನಾಲ್ಕು ರಾಜ್ಯಗಳ ವಿಧಾನಸಭೆಗಳ ಅವಧಿ 2019ರ ಮೇ, ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಇವೆಲ್ಲದರ ಜತೆಗೆ ಇತ್ತೀಚೆಗಷ್ಟೇ ವಿಸರ್ಜನೆಯಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೂ ಇದೇ ಸಂದರ್ಭದಲ್ಲಿ ಚುನಾವಣೆ ನಡೆಸುವ ಬಗ್ಗೆ ಆಯೋಗ ಈಗಾಗಲೇ ಹೇಳಿದೆ. ಕಣಿವೆ ರಾಜ್ಯದ ವಿಧಾನಸಭೆ ಅವಧಿ 6 ವರ್ಷಗಳಾಗಿದ್ದು, ನಿಗದಿತ ದಿನಾಂಕ ಪ್ರಕಾರ 2021 ಮಾ.16ಕ್ಕೆ ಮುಕ್ತಾಯವಾಗಬೇಕಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next