ಒಮ್ಮೆ ಒಂದು ಮಗು ಬಂದು ಸಾಗರ ತೀರದಲ್ಲಿ ನಿಂತು ನೋಡುತ್ತಿತ್ತಂತೆ. ಎಷ್ಟು ಹೊತ್ತಾದರೂ ನೀರಿಗೆ ಇಳಿಯಲು ಏಕೋ ಹಿಂಜರಿಕೆ. ನೀರಿಗೆ ಇಳಿಯಲೇ ಇಲ್ಲ. ಸಮುದ್ರಕ್ಕೂ ಕಂಡು ಬೇಸರವಾಗತೊಡಗಿತು. ಎಷ್ಟು ಮುದ್ದಾದ ಮಗು, ನನ್ನಲ್ಲಿ ಆಡುತ್ತಿಲ್ಲವಲ್ಲ ಎಂದು ಮೆಲ್ಲಗೆ ಶಾಂತವಾಗತೊಡಗಿತು. ಬಳಿಕ, ಮಗುವಲ್ಲಿ ಬಂದು ಸಮುದ್ರ ಕೇಳಿತಂತೆ, ‘ಯಾಕೋ ಮಗು, ಬರುವುದಿಲ್ಲವೇ?’ ಎಂದು. ಅದಕ್ಕೆ ಮಗು, ’ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ. ಮತ್ತೆ ಸಮುದ್ರ, ’ಹಾಗಾದರೆ ನಿನಗೆ ನೀರು ಇಷ್ಟವಿಲ್ಲವೇ?’ ಎಂದು ಕೇಳಿತು. ಅದಕ್ಕೂ ಮಗು, ’ಇದೆ, ಆದರೆ ಇದಲ್ಲ’ ಎಂದಿತು.
Advertisement
ಸಮುದ್ರಕ್ಕೆ ಅಚ್ಚರಿಯಾಯಿತು. ‘ನೀರಿಗ್ಯಾವ ವ್ಯತ್ಯಾಸವಿದೆ? ಅಲ್ಲಿಯದು, ಇಲ್ಲಿಯದು ಅಂತ. ಆ ನೀರು, ಈ ನೀರು ಅಂತ. ಎಲ್ಲ ಒಂದೇ. ಬಾ, ಒಮ್ಮೆ ಆಡು ನಿನಗೆ ಗೊತ್ತಾಗುತ್ತೆ’ ಎಂದು ಹೇಳಿತಂತೆ. ಅದರೂ ಮಗು ತನ್ನ ನಿರ್ಧಾರ ಬದಲಿಸಲಿಲ್ಲ. ಸಮುದ್ರಕ್ಕೇಕೋ ಅನುಮಾನ ಮೂಡಿತು. ’ನನ್ನನ್ನು ಕಂಡರೆ ‘ಯವೇ?’ ಎಂದು ಕೇಳಿದಾಗ ಮೆಲ್ಲನೆ ಮಗು, ಹೌದೋ ಅಲ್ಲವೋ ಎಂಬಂತೆ ತಲೆಯಾಡಿಸಿತು.
Related Articles
Advertisement
ಬದುಕು ಹಾಗೆಯೇ. ಸಮುದ್ರ ಥರವೂ ಹೌದು, ಗಾಳಿ ಥರವೂ ಹೌದು. ಅದೇ ಹೊತ್ತಿನಲ್ಲಿ ಶಾಂತವೂ ಹೌದು. ಹಾಗಾಗಿಯೇ ಭರವಸೆ ಹುಡುಕುವುದು ತಪ್ಪಲ್ಲ, ಅದು ಯಾವ ರೂಪದಲ್ಲಾದರೂ ಬರಬಹುದು. ಆದರೆ ಗ್ರಹಿಸಿ ಗುರುತಿಸುವ ಸಾಮರ್ಥ್ಯ ಇರಬೇಕು. ಇಲ್ಲದಿದ್ದರೆ ನಾವು ಮಹತ್ವದ್ದನ್ನು ಕಳೆದುಕೊಳ್ಳುತ್ತೇವೆ.
ಸಂದರ್ಭದ ಮುಖಾಮುಖಿಯಾಗುವುದು ಅತ್ಯಂತ ಅಗತ್ಯ. ಅದಾಗದೇ ಏನೂ ಸಿಗದು. ಯಾಕೆಂದರೆ ಹಲವು ಬಾರಿ ಸಂದರ್ಭಗಳು – ಸನ್ನಿವೇಶಗಳು ನಿರ್ಧಾರಗಳನ್ನು ಕೈಗೊಳ್ಳುತ್ತೇವೆಯೇ ಹೊರತು ನಮ್ಮ ಬುದ್ಧಿಯಲ್ಲ!