ಧನಾತ್ಮಕವಾದ ಯೋಚನೆಗಳಿಂದ ನಮ್ಮ ವ್ಯಕ್ತಿತ್ವ ಕೂಡಿರಬೇಕು. ಧನಾತ್ಮಕವಾಗಿ ಇದ್ದರೆ ಅಷ್ಟೇ ನಾವು ಜೀವನದಲ್ಲಿ ಉತ್ತುಂಗಕ್ಕೆ ಏರಬಹುದು. ನಾವು ಋಣಾತ್ಮಕವಾಗಿ ಯೋಚಿಸುತ್ತಾ ಕುಳಿತರೇ ನಾವು ಋಣಾತ್ಮಕವಾಗಿಯೇ ಇರುತ್ತೇವೆ. ಯಾವುದೇ ಸಾಧನೆ ಮಾಡಲು ಮುಂದಾಗುವುದಿಲ್ಲ.
Advertisement
ಧನಾತ್ಮಕ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಿನೀವು ಯಾವತ್ತೂ ಧನಾತ್ಮಕವಾದ ಮನೋಪ್ರವೃತ್ತಿಯನ್ನು ಒಳೆಸಿಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಅದೆಂಥ ದೊಡ್ಡ ಕಷ್ಟ ಬಂದರೂ ಅದನ್ನು ನೀವು ನಿವಾರಿಸಿಕೊಳ್ಳಬಹುದು. ನನ್ನಲ್ಲಿ ಈ ಕೆಲಸ ಸಾಧ್ಯವಿಲ್ಲ ಎಂದು ನೀವು ಕೊರಗಿದರೆ ಆ ಕೆಲಸ ನಿಮ್ಮಿಂದ ಆಗದು. ಧೈರ್ಯದಿಂದ ನಿಮ್ಮಲ್ಲಿ ಇರುವ ಸಾಮರ್ಥ್ಯದಿಂದ ಕೆಲಸವನ್ನು ಎದುರಿಸಿ ಆಗ ಅದು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮಗೆ ಯಾವ ಕೆಲಸಬೇಕು ಅದಕ್ಕೆ ನೀವು ಕಠಿನ ಪರಿಶ್ರಮ ಪಡಿ ಇದರಿಂದ ನಿಮಗೆ ಜಯ ಸಿಗುತ್ತದೆ.
ನಿನ್ನೆ ಏನಾದರೂ ಘಟನೆಗಳು ಸಂಭವಿಸಿದರೆ ಅದನ್ನು ನೀವು ಮರೆತು ಬಿಡಿ. ನಿನ್ನೆಯ ಬಗ್ಗೆ ಯೋಚಿಸುತ್ತಾ ಕೊರಗಬೇಡಿ. ಇಂದಿನ ಬಗ್ಗೆ ಹೊಸ ಆಲೋಚನೆ ಮಾಡಿ. ನಿನ್ನೆಯ ಬಗ್ಗೆ ನೀವು ಯೋಚಿಸುತ್ತಾ ಕುಳಿತರೆ ನೀವು ನಿನ್ನೆಯಲ್ಲೇ ಬಾಕಿ ಉಳಿಯುತ್ತೀರಿ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ
ಮೊದಲು ನಿಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ನಿಮ್ಮಲ್ಲಿರುವ ಕೆಟ್ಟ ಗುಣಗಳನ್ನು ಮರೆತು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ.
Related Articles
Advertisement
- ಪೂರ್ಣಿಮಾ ,ಪೆರ್ಣಂಕಿಲ