Advertisement

ಒಂದು ಜೀವ ಉಳಿಸಿದರೂ ಅದು ಮಹತ್ಸಾಧನೆಯೇ…

05:30 PM Jun 14, 2021 | Team Udayavani |

ಸಮುದ್ರ ತೀರದ ಬೀಚ್‌ನಲ್ಲಿ ವ್ಯಕ್ತಿಯೊಬ್ಬವಾಕಿಂಗ್‌ ಹೊರಟಿದ್ದ. ಬೆಳಗಿನ ಹೊತ್ತಲ್ಲವೇ?ಅಲೆಗಳ ಅಬ್ಬರ ಜೋರಾಗಿಯೇ ಇತ್ತು. ಜೋರುಶಬ್ದದೊಂದಿಗೆ ಪ್ರತಿ ಬಾರಿ ಅಲೆಬಂದಾಗಲೂ ಅದರ ಜೊತೆಗೆನೂರಕ್ಕೂ ಹೆಚ್ಚು ಮೀನುಗಳೂ ಬರುತ್ತಿದ್ದವು. ಅಲೆ, ಬಂದಷ್ಟೇಬೇಗನೆ ವಾಪಸ್‌ಹೋಗಿಬಿಡುತ್ತಿತ್ತು.ಮೀನುಗಳು ಮಾತ್ರತೀರದಲ್ಲಿನ ಮರಳಿನ ಮೇಲೆ ಉಳಿಯುತ್ತಿದ್ದವು.

Advertisement

ಒಂದೆರಡು ನಿಮಿಷ ವಿಲವಿಲಒದ್ದಾಡಿ ಕೆಲವು ಜೀವಬಿಡುತ್ತಿದ್ದವು.ಬೀಚ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಇದನ್ನು ಗಮನಿಸಿದ. ತಕ್ಷಣವೇ ವಾಕ್‌ಮಾಡುವುದನ್ನು ನಿಲ್ಲಿಸಿ, ಮರಳಿನ ಮೇಲೆ ಬಿದ್ದುಒದ್ದಾಡುತ್ತಿದ್ದ ಮೀನುಗಳನ್ನು ಒಂದೊಂದಾಗಿಎತ್ತಿಕೊಂಡು ಸಮುದ್ರಕ್ಕೆ ಎಸೆಯತೊಡಗಿದ.ಇದರಿಂದಾಗಿ, ಅಲೆಯೊಂದಿಗೆತೇಲಿಕೊಂಡು ಬಂದುತೀರದಲ್ಲಿ ಸಾಯುತ್ತಿದ್ದನೂರಾರು ಮೀನುಗಳಲ್ಲಿಕೆಲವು ಮೀನುಗಳಾದರೂಮತ್ತೆ ಸಮುದ್ರದ ಮಡಿಲುಸೇರಲು ಸಾಧ್ಯವಾಯಿತು.ತೀರದಲ್ಲಿದ್ದ ಇತರರಿಗೆ ಈವ್ಯಕ್ತಿಯ ವರ್ತನೆ ವಿಚಿತ್ರ ಅನ್ನಿಸಿತು.

ಕ್ಷಣಕ್ಕೊಮ್ಮೆ ಅಲೆಬರುತ್ತದೆ. ಪ್ರತಿಯೊಂದುಅಲೆಯೂ ನೂರಾರು ಮೀನುಗಳನ್ನು ಹೊತ್ತುತಂದು ಮರಳ ಮೇಲೆ ಎಸೆದು ಹೋಗುತ್ತದೆ.ಅದರಲ್ಲಿ ಹತ್ತಿಪ್ಪತ್ತು ಮೀನುಗಳನ್ನು ಉಳಿಸಿದರೆಅದರಿಂದ ಏನುಪಯೋಗ? ಎಂದೇ ಅವರೆಲ್ಲಾಯೋಚಿಸಿದರು. ಒಬ್ಬನಂತೂ ಹಾಗಂತ ಬಾಯಿಬಿಟ್ಟು ಹೇಳಿಬಿಟ್ಟ. ನಿಮ್ಮ ಈ ಕೆಲಸದಿಂದಯಾವ ಮಹಾ ಬದಲಾವಣೆ ಆಗುತ್ತದೆ ಸಾರ್‌?ಎಂದು ವ್ಯಂಗ್ಯವಾಗಿ ಕೇಳಿದ.

ವಾಕ್‌ ಮಾಡುತ್ತಿದ್ದ ವ್ಯಕ್ತಿ ಎರಡು ಹೆಜ್ಜೆ ಮುಂದಿಟ್ಟವನೇ, ಅಲ್ಲಿಒದ್ದಾಡುತ್ತಾ ಬಿದ್ದಿದ್ದ ಎರಡು ಮೀನುಗಳನ್ನು ಎತ್ತಿಸಮುದ್ರಕ್ಕೆ ಎಸೆದು ಹೇಳಿದ:”ಏನೋ ಕ್ರಾಂತಿ ಮಾಡ್ತೇನೆ ಅಂದುಕೊಂಡುಯಾವುದೇ ಕೆಲಸವನ್ನೂ ಮಾಡ್ತಾ ಇಲ್ಲ ನಾನು.ನೂರು ಮೀನುಗಳಲ್ಲಿ ಹತ್ತು ಮೀನುಗಳ ಜೀವಉಳಿದರೂ ಅದರಿಂದ ಒಂದು ಬದಲಾವಣೆಆದಂತೆಯೇ. ನಮ್ಮ ಕೆಲಸದ ಕುರಿತು ಧನ್ಯತೆಅನುಭವಿಸಲು ಅಷ್ಟು ಸಾಕು…’

Advertisement

Udayavani is now on Telegram. Click here to join our channel and stay updated with the latest news.

Next