ಹೆದರಬೇಡಿ, ಗಾಬರಿಯಾಗಬೇಡಿ ಎಂಬ ವೈದ್ಯರ ಸ್ನೇಹಿತರ ಆತ್ಮ ವಿಶ್ವಾಸದ ಮಾತುಗಳಿಂದಲೇ ನಾನು ಕೊರೊನಾ ಗೆದ್ದೆ.ಮೊದಲನೇ ಅಲೆ ಬಂದಾಗ ಕರ್ನಾಟಕ ಚಲನಚಿತ್ರಸಂಕಲನಕಾರ ಸಂಘದ ಪದಾಧಿಕಾರಿಗಳಾದ ಎಡಿಟರ್ ಶಿವು , ನಾಗೇಂದ್ರ ಅರಸ್, ಡಿಆರ್‌ಸಂಪತ್, ಶ್ರೀ ಕ್ರೇಜಿ ಮೈಂಡ್ಸ್ ಇವರ ಜೊತೆ ಸಂಘದ ಸದಸ್ಯರಿಗೆ ನೆರವಾಗಲು ತುಂಬಾ ಓಡಾಡಿದೆವು.
ಈಬಾರಿ ಕೊರೊನಾ ಜಾಸ್ತಿಯಾಗಿ ಲಾಕ್‌ಡೌನ್ ಆದಾಗಏನಾದರೂ ಮಾಡೋಣವೆಂದು ಮಾತುಕತೆಯಲ್ಲಿಇರುವಾಗ ನನಗೆ ಜ್ವರ ಬಂತು. ಎರಡು ದಿನಗಳನಂತರಜ್ವರ ಮಾಯವಾಯಿತು.ಮರುದಿನ ಬೆಳಗ್ಗೆ ತಿಂಡಿ ತಿನ್ನಲು ಕುಳಿತಾಗ ಗಂಜಿಮತ್ತು ಹುರಿದ ಬೆಂಡೆಕಾಯಿ ಪಲ್ಯ ಮಾಡಿದ್ದರು ಬಿಸಿಬಿಸಿ ಕೊಟ್ಟರು ನನಗೆ ಜ್ವರಬಂದು ಬಾಯಿ ಸಪ್ಪೆ ಆಗಿದೆಎಂದು ಗಂಜಿಗೆ ಮೆಣಸು,ಜೀರಿಗೆ, ಬೆಳ್ಳುಳ್ಳಿ ಎಲ್ಲಾ ಚೆನ್ನಾಗಿ ಹಾಕಿ ಮಾಡಿದ್ದರು.
ನಾನುಅರ್ಧ ಮುಗಿಸಿದ್ದೆ ಮಕ್ಕಳುಬಂದು ಜೊತೆಯಾದರುಅವರು ಸ್ವಲ್ಪ ತಿಂದು ಏನಮ್ಮಇಷ್ಟೊಂದು ಖಾರ ಮಾಡಿದ್ದೀರಾ ನಾವು ತಿನ °ಲು ಆಗುವುದಿಲ್ಲ ಎಂದರು,ನಾನು , ಪೂರ್ತಿ ತಿಂದು ಮುಗಿಸಿದೆ ನನಗೆ ಖಾರವೇ ಅನಿಸಲಿಲ É ಸುಮ್ಮನೆ ತಿನ್ನಿ ಎಂದೆ, ನಿಜವಾಗಲೂ ಅದು ತುಂಬಾ ಖಾರವೇ ಇತ್ತು. ಅದರ ಪ್ರಭಾವ ನನ್ನಮೂಗು, ನೆತ್ತಿಯಲ್ಲಿ ನೀರು ಬಂತು ಆಗಲೇನನಗನಿಸಿದ್ದು ಇದು ಕೊರೊನಾ ಲಕ್ಷಣಗಳು ಅಂಥ.ತಡ ಮಾಡದೆ ಆರ್‌ಟಿಪಿಸಿ ಆರ್ ಪರೀಕ್ಷೆ ಮಾಡಿಸಿ ಮನೆಯವರಿಂದ ಆ ಕೂಡಲೆ ಪ್ರತ್ಯೇಕನಾದೆ ಮರುದಿನ ಪಾಸಿಟಿವ್ ಎಂದು ತಿಳಿಯಿತು. ಬಿಬಿಎಂಪಿ ಇಂದ ಕರೆ ಬಂತು ನನಗೆ ಪಾಸಿಟಿವ್‌ಬಂದಿರುವ ಬಗ್ಗೆ ತಿಳಿಸಿ, ಡಾಕ್ಟರ್ ನಿಮ್ಮನ್ನು ಸಂಪರ್ಕಮಾಡುತ್ತಾರೆ ಎಂದರು.
ಡಾಕ್ಟರ್ ವಿದ್ಯಾ ಅವರು ಕರೆಮಾಡಿ, ಪಾಸಿಟಿವ್ ಬಂದಿರುವ ಬಗ್ಗೆ ಹೆದರುವುದುಬೇಡ ಎಂದು ಧೈರ್ಯ ತುಂಬಿ, ಮಾತ್ರೆಗಳನ್ನು ಮನೆಗೆತಂದುಕೊಟ್ಟು ನಿತ್ಯ ಕರೆ ಮಾಡಿ ಆರೋಗ್ಯದ ಚೇತರಿಕೆಬಗ್ಗೆ ವಿಚಾರಿಸುತ್ತಿದ್ದರು,ಏನಾದ್ರೂ ತೊಂದರೆಯಾದರೆಕರೆ ಮಾಡಲು ತಿಳಿಸಿದ್ದರು, ಕೆಲವೇ ದಿನಗಳಲ್ಲಿಕೊರೊನಾ ಜಯಸಿದೆ. ಡಾಕ್ಟರ್ ವಿದ್ಯಾರಿಗೆ ನನ್ನಸಲಾಮ್. ನನ್ನ ಹಿತೈಷಿಗಳು ಚಲನಚಿತ್ರ ನಿರ್ದೇಶಕಪಿ.ಎಚ್.ವಿಶ್ವನಾಥ್, ಗೋಪಿ ಪೀಣ್ಯ ಮತ್ತು ಸಂಪತ್‌ಹಾಗೂನಟ ಶ್ರೀ ರಾಜ್ ಸ್ನೇಹಿತರಾದ ಪ್ರಶಾಂತ್,ಗಣಪತಿ, ಮತ್ತು ಬಿ.ವಿ. ಕುಮಾರ್ ನನಗೆ ಪ್ರತಿದಿನಕರೆಮಾಡಿ ಆತ್ಮ ಸ್ಥೈರ್ಯ ತುಂಬುತ್ತಿದ ªರುಇವರೆಲ್ಲರಿಗೂ ನನ್ನದೊಂದು ಸಲಾಮ್.