ವೈದ್ಯರ, ಮನೆಯವರ ಸಹಕಾರ ಹಾಗೂ ಸ್ನೇಹಿತರು ತುಂಬಿದ ಧೈರ್ಯದಿಂದ ಕೊರೊನಾ ಗೆದ್ದೆ. ಮೈಸೂರಿನ ಲಾಜಿಸ್ಟಿಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದೇನೆ. ಕೆಲಸದ ಸ್ಥಳ, ಹೊರಗಡೆ ತೆರಳಿದಾಗ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ಎಷ್ಟೇ ಜಾಗೃತನಾಗಿದ್ದರೂ ಕೊರೊನಾ ಸೋಂಕಿನ ರೋಗ ಲಕ್ಷಣ ನನ್ನಲ್ಲಿ ಕಂಡು ಬಂದಿತ್ತು.
ಮೈಸೂರಿನಲ್ಲಿದ್ದಾಗ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು.ಆಗ ಮಾತ್ರೆ ತೆಗೆದುಕೊಂಡೆ. ನಂತರ ಯುಗಾದಿ ಹಬ್ಬಹಿನ್ನೆಲೆ ಮಾ.14ರಂದು ಬೆಂಗಳೂರಿಗೆ ಬಂದಾಗಎರಡು ದಿನ ಮನೆಯಲ್ಲೇ ಹೋಂ ಕ್ವಾರಂಟೈನ್‌ಗೆಒಳಪಟ. ಆ ೆr ಗ ತುಂಬಾ ಜ್ವರ ಹಾಗೂ ಸುಸ್ತುಕಾಣಿಸಿಕೊಂಡಿತ್ತು. ನವನೀತ್ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆಪಡೆದ. ವೈದ್ಯ ನವನೀತ್ ಅವರು, ಕೊರೊನಾಸೋಂಕಿನ ರೋಗ ಲಕ್ಷಣಗಳಿವೆ. ಪರೀಕ್ಷೆ ಮಾಡಿಸಿ,ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಸಲಹೆನೀಡಿದರು. ವೈದ್ಯರ ಸಲಹೆಯಂತೆ ಮಾ.15ರಂದುಕೆಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಮಾಡಿಸಿದ್ದೆ. ಬಳಿಕವೂ ತೀವ್ರಜ್ವರ ಇತ್ತು. ಮಾ. 16ರಂದುಬೆಳಗ್ಗೆ ಪಾಸಿಟಿವ್ ವರದಿಬಂತು.
ತಕ್ಷಣ ಬಿಬಿಎಂಪಿಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿನೀಡಿದೆ. ನನ್ನ ವಿಳಾಸ ಪಡೆದ ಅವರು, ಒಂದು ಗಂಟೆಬಳಿಕ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟರು. ನೇರವಾಗಿಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಗೆತೆರಳಿ ದಾಖಲಾಗಿದ್ದೆನು.ಆಸ್ಪತ್ರೆಗೆ ದಾಖಲಾದ ಬಳಿಕ ತಾಯಿ, ನನ್ನ ಪತ್ನಿಮತ್ತು ಇಬ್ಬರು ಮಕ್ಕಳಿಗೆ ಪರೀಕ್ಷೆ ಮಾಡಿಸಿದಾಗನೆಗೆಟಿವ್ ಬಂತು. ಹೀಗಾಗಿ, ನನ್ನ ಮನಸ್ಸಿಗೆ ಹೆಚ್ಚುಸಮಾಧಾನವಾಯಿತು. ಸ್ವಲ್ಪ ಧೈರ್ಯ ಬಂತು.ಆದರೆ, ರೋಗ ಲಕ್ಷಣ ಕಾಣಿಸಿಕೊಂಡಿದ್ದರಿಂದದೇಹದ ತೂಕಕಡಿಮೆಯಾಗಿತ್ತು.
ಎಂಟು ದಿನದಲ್ಲಿ ಗುಣಮುಖ: ಆಸ್ಪತ್ರೆಯಲ್ಲಿರುವಾಗ ಮನೆಯವರು ಹಾಗೂ ನನ್ನ ಸ್ನೇಹಿತರು ಕರೆಮಾಡಿ ಧೈರ್ಯ ತುಂಬುತ್ತಿದ್ದರು. ನನಗೆ ಬೇಕಾದಊಟವನ್ನು ಹೊರಗಡೆಯಿಂದ ತಂದು ಕೊಡುತ್ತಿದ್ದರು. ವೈದ್ಯರ ಸಲಹೆಯಂತೆ ಚೆನ್ನಾಗಿ ಊಟಮಾಡುತ್ತಿದ್ದೆ. ಎಂಟು ದಿನಗಳ ಬಳಿಕ ಗುಣಮುಖನಾದೆ. 9ನೇ ದಿನ ಸಂಜೆ 4 ಗಂಟೆಗೆ ಡಿಸಾcರ್ಜ್‌ಮಾಡಿದರು.
ಮನೆಗೆ ನೇರವಾಗಿ ತೆರಳದೆ ನಮ್ಮಮತ್ತೂಂದು ಮನೆಗೆ ಹೋಗಿ ಅಲ್ಲೇ 10 ದಿನಗಳಕಾಲ ಹೋಂ ಕ್ವರಂಟೈನ್ ಆದೆ. ಈಗಸಂಪೂರ್ಣವಾಗಿ ಗುಣಮುಖನಾಗಿದ್ದೇನೆ.
ಧನ್ಯವಾದಗಳು: ನನ್ನನ್ನು ಉಪಚರಿಸಿದ ರಾಜರಾಜೇಶ್ವರಿ ಆಸ್ಪತ್ರೆ ವೈದ್ಯರು, ನರ್ಸ್‌ಗಳು ಹಾಗೂಇತರೆ ಸಿಬ್ಬಂದಿಗೆ, ನನಗೆ ಸೂಕ್ತ ಸಲಹೆ ನೀಡಿದಫ್ಯಾಮಿಲಿ ಡಾಕ್ಟರ್ ಡಾ.ನವನೀತ್, ಡಾ.ಶಿವಕುಮಾರ್ ಹಾಗೂ ಆತ್ಮಸ್ಥೈರ್ಯ ತುಂಬಿದ ಸ್ನೇಹಿತರುಮತ್ತುಕುಟುಂಬದವರಿಗೆ ನನ್ನ ಧನ್ಯವಾದ.
ಸಂತೋಷ್, ಲಾಜಿಸ್ಟಿಕ್ ಕಂಪನಿ ಉದ್ಯೋಗಿ, ಕೆಂಗೇರಿ