Advertisement

ವಿಲಿಯಮ್ಸನ್‌ ವಾಪಸ್‌, ರಾಸ್‌ ಟಯ್ಲರ್‌ ಹೊರಕ್ಕೆ

06:30 AM Mar 03, 2018 | |

ವೆಲ್ಲಿಂಗ್ಟನ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯಕ್ಕೆ ಅಣಿಯಾಗುತ್ತಿರುವ ನ್ಯೂಜಿಲ್ಯಾಂಡಿಗೆ ಸಂಭ್ರಮ, ಆಘಾತವೆರಡೂ ಏಕಕಾಲಕ್ಕೆ ಎದುರಾಗಿದೆ. 

Advertisement

ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಮರಳಿದರೆ, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟಯ್ಲರ್‌ ಗಾಯಾಳಾಗಿ ಹೊರಗುಳಿದಿದ್ದಾರೆ.

ಮೌಂಟ್‌ ಮಾಂಗನಿಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಬ್ಯಾಟಿಂಗ್‌ ನಡೆಸುವಾಗ ಟಯ್ಲರ್‌ ಗಾಯಾಳಾಗಿದ್ದರು. ಈ ಪಂದ್ಯವನ್ನು ನ್ಯೂಜಿಲ್ಯಾಂಡ್‌ 6 ವಿಕೆಟ್‌ಗಳಿಂದ ಸೋತಿತ್ತು. ಇದರಿಂದ ಸರಣಿ 1-1 ಸಮಬಲಕ್ಕೆ ಬಂದಿತ್ತು. ಈ ಪಂದ್ಯದಲ್ಲಿ ನಾಯಕ ವಿಲಿಯಮ್ಸನ್‌ ಆಡಿರಲಿಲ್ಲ. ಟಿಮ್‌ ಸೌಥಿ ನ್ಯೂಜಿಲ್ಯಾಂಡ್‌ ತಂಡವನ್ನು ಮುನ್ನಡೆಸಿದ್ದರು. ಸರಣಿಯ 3ನೇ ಪಂದ್ಯ ಶನಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next