Advertisement

ಜಮ್ಮುವಿನಲ್ಲೂ ಕಾಣಿಸಿಕೊಂಡ ಕೊರೊನಾ: ಮಾರ್ಚ್ 31ರವರೆಗೆ ಶಾಲೆಗಳು ಬಂದ್

11:41 PM Mar 20, 2020 | keerthan |

ಹೊಸದಿಲ್ಲಿ: ಮಾರಣಾಂತಿಕ ಕೊರೊನಾ ವೈರಸ್ ಭಾರತದಲ್ಲಿ ಮತ್ತಷ್ಟು ಹೆಚ್ಚುತ್ತಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಸಂಶಯವಿದ್ದ ಎರಡು ಪ್ರಕರಣಗಳ ವರದಿ ಸರಕಾರದ ಕೈಸೇರಿದ್ದು, ವೈರಸ್ ಪಾಸಿಟಿವ್ ಇರುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

Advertisement

ಈ ಇಬ್ಬರು ಇಟಲಿ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಬಂದಿದ್ದರು. ಇತ್ತೀಚೆಗೆ ಸ್ವದೇಶಕ್ಕೆ ಭೇಟಿ ನೀಡಿದ್ದ ಅವರು ಜಮ್ಮುವಿನ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ದಾಖಲಾಗಿದ್ದರು.

ಜಮ್ಮು ಮತ್ತು ಸಾಂಬಾದಲ್ಲಿ ಮಾರ್ಚ್ 31ರವರೆಗೂ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ರಾಜ್ಯದಲ್ಲಿ ಮಾರ್ಚ್ 31ರವರೆಗೆ ಬಯೋಮೆಟ್ರಿಕ್ ಬಳಕೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ.

ಕ್ಯಾಲಿಫೋರ್ನಿಯಾದ ಕ್ರೂಸ್ ಶಿಪ್ ನ 21 ಮಂದಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next