Advertisement
ಗುಡಿಹಾಳ ಉಪ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ವಿಶಾಲಕುಮಾರ ಬುಶೆಟ್ಟಿ ಹಾಗೂ ಗಂಗಮ್ಮ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಗರ್ಭಿಣಿಯರು, ಬಾಣಂತಿಯರು ಹಸಿ ತರಕಾರಿ, ಕಾಳು ಮತ್ತು ಮೊಟ್ಟೆ , ಹಾಲು, ಹಣ್ಣು ಹಂಪಲು ಸೇವಿಸಬೇಕು ಎಂದರು. ಮಟ್ಟೂರು ಗ್ರಾಪಂನ ಮೌನೇಶ, ಗುಡಿಹಾಳ, ತೆರಿಭಾವಿ, ಬುದ್ದಿನ್ನಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಭಾಗಿಯಾಗಿದ್ದರು.
Related Articles
Advertisement
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ತೆರಿಬಾವಿ, ಸ್ವಾತಂತ್ರ್ಯ ಬಂದು 70 ವರ್ಷ ಗತಿಸಿದರೂ ದಲಿತರ ಮೇಲೆ ಹಲ್ಲೆಯಂಥ ಘಟನೆಗಳುನಡೆಯುತ್ತವೆ. ದಲಿತರು ಮನುಷ್ಯರು ಎನ್ನುವುದನ್ನು ಮರೆತು ಪಶುಗಳಂತೆ ನೋಡುವ ಮನೋಭಾವ ಬದಲಾಗಬೇಕು ಎಂದರು.
ಮಾದಿಗ ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ಬಸವರಾಜ ಹಂಚಿನಾಳ ಮಾತನಾಡಿ, ಬೂದೂರು ಘಟನೆಯಲ್ಲಿ ಮಾದಿಗರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮಾದಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಮಾದಿಗರ ಮೇಲೆ ದಾಖಲಾಗಿರುವ ದೂರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ದಾನಪ್ಪ ನಿಲೋಗಲ್, ಹುಲಗಪ್ಪ ಗುಡಿಹಾಳ, ಶಿವಕುಮಾರ ದೇವರಮನಿ, ಶರಣಪ್ಪ ಹಿರೇಮನಿ, ಶರಣಬಸವ ಹಂಚಿನಾಳ ಇತರರು ಇದ್ದರು.