ಸ್ವಲ್ಪಗತಿಯಲ್ಲಿ ಮಂದ ಎನಿಸಿದ್ದರೂ ಇನ್ನೂ ಸ್ಪಷ್ಟವಾಗಿ ಹೇಳಲಾಗದ ಸ್ಥಿತಿ ಇಲ್ಲಿದೆ. ಪ್ರಸ್ತುತ ಸುಮಾರು 15 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೋರ್ಚುಗಲ್‌ನ ಅಧ್ಯಕ್ಷ ಮಾರ್ಸೆಲೊ ರೆಬೆಲೊ, ಈ ಹಿಂದೆ ಘೋಷಿಸಿದ್ದ ಎಪ್ರಿಲ್ 17 ರವರೆಗಿನ ಲಾಕ್‌ಡೌನ್ ಮೇ 1 ರವರೆಗೂ ಮುಂದುವರಿಯಲಿದೆ ಎಂದು ಪ್ರಕಟಿಸಿದ್ದಾರೆ.ಪೋರ್ಚುಗಲ್‌ನಲ್ಲಿ ಮಾ. 18 ರಂದು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಜತೆಗೆ ಕಳೆದ ವಾರ ಎಪ್ರಿಲ್ 17 ರವರೆಗೂ ಲಾಕ್‌ಡೌನ್ ನ್ನು ಮುಂದುವರಿಸಿತ್ತು.
Advertisement
ನಾವಿನ್ನೂ ಯುದ್ಧವನ್ನು ಗೆದ್ದಿಲ್ಲ ಎಂದು ಹೇಳಿರುವ ಅಧ್ಯಕ್ಷ, ನಮ್ಮ ಹೋರಾಟ ಇನ್ನಷ್ಟು ಸ್ಪಷ್ಟ ಹಾಗೂ ನಿಖರವಾಗಿ ನಡೆಯಬೇಕಿದೆ. ಹಾಗಾಗಿ ನಮ್ಮ ಶಸ್ತ್ರಗಳನ್ನು ಕೆಳಗಿಳಿಸಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.ರೆಬೆಲೋ ಸಹ ಎರಡು ವಾರಗಳ ಕಾಲ ಕ್ವಾರಂಟೇನ್‌ನಲ್ಲಿದ್ದು, ಆ ಬಳಿಕ ಕೋವಿಡ್ 19 ನೆಗೆಟಿವ್ ಫಲಿತಾಂಶ ಬಂದಿತ್ತು. ಇದುವರೆಗೂ ಪೋರ್ಚುಗಲ್‌ನಲ್ಲಿ 15, 472 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 435 ಮಂದಿ ಸತ್ತಿದ್ದಾರೆ. ನೆರೆಯ ರಾಷ್ಟ್ರವಾದ ಸ್ಪೇನ್‌ನಲ್ಲಿ ಆಗಿರುವ ಅನಾಹುತಗಳನ್ನು ಕಂಡರೆ ಇಲ್ಲಿಯ ಸಾವು ನೋವು ತೀರಾ ಕಡಿಮೆ ಎನ್ನಲಾಗುತ್ತಿದೆ. ಸ್ಪೇನ್ ನಲ್ಲಿ ಸಮಾರು 15, 843 ಮಂದಿ ಸತ್ತಿದ್ದಾರೆ. ಇಟಲಿಯ ಬಳಿಕ ಅತಿ ಹೆಚ್ಚು ಮಂದಿ ಸ್ಪೇನ್‌ನಲ್ಲಿ ಸೋಂಕಿನಿಂದ ಸತ್ತಿದ್ದಾರೆ.
Related Articles
Advertisement
ಸ್ಪೇನ್‌ನಲ್ಲಿ ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಳುತ್ತಿದ್ದು, ಸೋಂಕಿನ ಹರಡುವಿಕೆ ನಿಧಾನಗೊಂಡಿದೆ. ಸಾವಿನ ಸಂಖ್ಯೆಯಲ್ಲೂ ಕೊಂಚ ಇಳಿಕೆಯಾಗಿದೆ.