Advertisement
ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಭಾಗವಾಗಿ ಉಳ್ಳಾಲ ತಾಲೂಕಿನ ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಹಿಂದೂ ಸಂಘಟನೆಯಲ್ಲಿ ಸಕ್ರೀಯರಾಗಿರುವ ಮುಖಂಡರೊಬ್ಬರ ಸಂಬಂಧಿ ಮಹಿಳೆಯ ಹಳೆಯ ಫೋಟೋ ಅನುಮತಿ ಇಲ್ಲದೆ ಯು.ಟಿ. ಖಾದರ್ ಬೆಂಬಲಿಗರು ಫ್ಲೆಕ್ಸ್ ಮಾಡಿ ಕೆಳಗೆ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸುವ ಯು.ಟಿ.ಖಾದರ್ ಚಿತ್ರವನ್ಬು ಹಾಕಿ ಸಭಾಂಗಣದ ಹೊರಗೆ ಅಳವಡಿಸಿದ್ದರು.
ನವರಾತ್ರಿ ಹಿಂದೂಗಳಿಗೆ ಅತ್ಯಂತ ಮಹತ್ವದ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಬಾಳೆ ಎಲೆ ಹಾಕಿ ಸೀಮಂತ ಮಾಡಿರುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಘಟನೆ ಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ,ಅನುಮತಿ ಇಲ್ಲದೆ ಹಿಂದೂ ಮಹಿಳೆಯ ಫೋಟೋ ಬಳಕೆ ಮಾಡಿರುವುದು ಅಪರಾಧ ಎಂದಿದ್ದಾರೆ.